ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ ನಟ್ ಯಶ್ ದಂಪತಿ

ಭಟ್ಕಳ : ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ನಟ ಯಶ್ ಹಾಗೂ ರಾದಿಕಾ ಪಂಡಿತ್ ದಂಪತಿ ಗುರುವಾರ ಸಂಜೆ 5 ಗಂಟೆಗೆ ಭೇಟಿ ‌ನೀಡಿ ದೇವರ ದರ್ಶನ ಪಡೆದರು.

ನಂತರಾ ಸಂಜೆ 6 ಗಂಟೆಗೆ ಚಿತ್ರಾಪುರ ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ 2 ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದರು.

ಚಿತ್ರಾಪುರಕ್ಕೆ ಯಶ್ ರಾಧಿಕಾ ದಂಪತಿಗಳು ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಯಶ್ ಅಗಮನಕ್ಕಾಗಿ ಕಾಯುತ್ತಿದರು. ಬಳಿಕ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ ರಾತ್ರಿ 8.30ಕ್ಕೆ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ, ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದರು.

ಯಶ್ ಹಾಗೂ ರಾಧಿಕಾ ಪಂಡಿತ್‌ ಜೊತೆಗೆ ಮಗಳು ಐರಾ, ಮಗ ಯಥರ್ವ ಹಾಗೂ ರಾಧಿಕಾ ತಂದೆ, ತಾಯಿ ಕೂಡ ಆಗಮಿಸಿದ್ದರು.