ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯಲ್ಲಿ 7632 ಸಿಬ್ಬಂದಿ ನಿಯೋಜನೆ.

 ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು  ಯಾವುದೇ ಗೊಂದಲ ಗಳಿಗೆ ಆಸ್ಪದ ನೀಡದಂತೆ ಸುಗಮ ಮತ್ತು ಪಾರದರ್ಶಕವಾಗಿ ನಡೆಸಲು , ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಜಿಲ್ಲೆಯಲ್ಲಿ  ಒಟ್ಟು 7632 ಸಿಬ್ಬಂದಿ ನಿಯೋಜಿಸಲಾಗಿದೆ.

ಚುನಾವಣಾ ಕರ್ತವ್ಯ ನಿರ್ವಹಿಸಲು  ಅಗತ್ಯವಿರುವ ಸಿಬ್ಬಂದಿಗಳ ನಿಯೋಜನೆ ಕುರಿತಂತೆ ರ‍್ಯಾಂಡಮೈಸೇಷನ್ ಕಾರ್ಯ  ನಡೆದಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯದ ಆದೇಶ ಪತ್ರಗಳನ್ನು ಕಳುಹಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು 1435 ಮತಗಟ್ಟೆ ಸಿಬ್ಬಂದಿ, 1908 ಪ್ರಿಸೈಡಿಂಗ್ ಅಧಿಕಾರಿಗಳು,1908 ಸಹಾಯಕ ಮತಗಟ್ಟೆ ಅಧಿಕಾರಿಗಳು,3816 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 7632 ಸಿಬ್ಬಂದಿ ಗಳನ್ನು ನಿಯೋಜಿಸಲಾಗಿದೆ.

ಅಂಕೋಲ ತಾಲೂಕಿನಲ್ಲಿ 638, ಭಟ್ಕಳ 595,ಹಳಿಯಾಳ 645, ಹೊನ್ನಾವರ 882,ಕಾರವಾರ 864, ಕುಮಟಾ 840, ಮುಂಡಗೋಡು 516,ಸಿದ್ದಾಪುರ 646,ಶಿರಸಿ 1113,ಜೋಯಿಡಾ 289, ಯಲ್ಲಾಪುರ 503 ಮತ್ತು ದಾಂಡೇಲಿ ಯಲ್ಲಿ 101 ಸೇರಿದಂತೆ  ವಿವಿಧ ಇಲಾಖೆಗಳ ಒಟ್ಟು 7632 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು 

ರ‍್ಯಾಂಡಮೈಸೇಷನ್ ಮೂಲಕ ಆಯ್ಕೆ ಮಾಡಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿರುವ  ಎಲ್ಲಾ ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ   ಅವರು ಕರ್ತವ್ಯ ನಿರ್ವಹಿಸುವ ತಾಲೂಕುಗಳಲ್ಲಿ ಏಪ್ರಿಲ್ 16 ರಂದು ಮೊದಲ ಹಂತದ ತರಬೇತಿ ಆಯೋಜಿಸಲಾಗಿದ್ದು, ತರಬೇತಿ ಸಮಯದಲ್ಲಿ ಸಿಬ್ಬಂದಿಗೆ ಇ.ವಿ.ಎಂ ಮತ್ತು ವಿವಿ ಪ್ಯಾಟ್ ಗಳ ಬಳಕೆ ಸೇರಿದಂತೆ  ಸುಗಮ ಚುನಾವಣಾ ಕರ್ತವ್ಯ ಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಮಗ್ರ ತರಬೇತಿಯ ಜೊತೆಗೆ , ಅಂಚೆ ಮತದಾನ ಮಾಡಲು ಅಗತ್ಯವಿರುವ ಫಾರಂ ಗಳ ವಿತರಣೆ ಕೂಡಾ ಮಾಡಲಾಗುತ್ತಿದೆ.

ಚುನಾವಣಾ ಕರ್ತವ್ಯಕ್ಕೆ ರ‍್ಯಾಂಡಮೈಸೇಷನ್ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ನೇಮಿಸಲಾಗಿದೆ.

ಕರ್ತವ್ಯಕ್ಕೆ  ನಿಯೋಜಿಸಿರುವ ಎಲ್ಲಾ ಸಿಬ್ಬಂದಿಗಳು ತಮ್ಮ ಆದೇಶಪತ್ರಗಳನ್ನು ಸ್ವೀಕರಿಸಿ, ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಬೇಕು.  ತರಬೇತಿ ಸಮಯದಲ್ಲಿ  ತಮ್ಮ ಎಲ್ಲಾ ಗೊಂದಲಗಳನ್ನು  ಬಗೆಹರಿಸಿಕೊಂಡು , ಸುಗಮವಾಗಿ ಮತದಾನ ನಡೆಯುವಂತೆ   ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಕರ್ತವ್ಯ ದಲ್ಲಿ  ನಿರ್ಲಕ್ಷತನ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು : ಗಂಗೂಬಾಯಿ ಮಾನಕರ, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಎಂದು ಜಿಲ್ಲಾಧಿಕಾರಿಗಳು. ಉತ್ತರ ಕನ್ನಡ ಜಿಲ್ಲೆ.