ಹೊನ್ನಾವರ, ಮಾರ್ಚ್ 21 : ತಾಲೂಕಿನ ಕವಲಕ್ಕಿಯಲ್ಲಿ ವಿವಾಹಿತ ಮಹಿಳೆಯ ಅಶ್ಲೀಲ ಚಿತ್ರವನ್ನು ಗೋಡೆಗಂಟಿಸಿ ಅಮಾನವೀಯ ಕಿಡಿಗೇಡಿ ಕೃತ್ಯ ನಡೆಸಿದ್ದು, ಆ ಕುರಿತು ನೊಂದ ಮಹಿಳೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಶಂಕಿತ ಆರೋಪಿಯನ್ನು ಪೋಲಿಸರು ಬಂಧಿಸಿ, ಆತ ನ್ಯಾಯಾಲಯದಿಂದ ಜಾಮೀನು ಪಡೆದು ಹಠಾತ್ ನಾಪತ್ತೆಯಾದ ಘಟನೆ ನಡೆದಿದೆ…
ತಾಲೂಕಿನ ಕವಲಕ್ಕಿಯಲ್ಲಿ ವಾಸವಾಗಿರುವ 29 ವರ್ಷದ ಮಹಿಳೆಯ ಪೋಟೊಗಳನ್ನು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಕಂಪೌಂಡ್ ಗೋಡೆಗಳಿಗೆ ಹಾಗೂ ಅಕ್ಕಪಕ್ಕದ ಗೋಡೆಗಳಿಗೆ ಅಂಟಿಸಿಲಾಗಿತ್ತು. ಬುಧವಾರ ಬೆಳೆಗ್ಗೆ ಇದನ್ನು ಗಮನಿಸಿದ ಜನರಿಂದ ವಿಷಯ ತಿಳಿದ ಪೋಟೋದಲ್ಲಿರುವ ಮಹಿಳೆ ಮತ್ತು ಆಕೆಯ ಪತಿ ಪೋಟೋಗಳನ್ನು ಕಿತ್ತು ನೊಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಮತ್ತು ಶಂಕಿತ ಆರೋಪಿ ಸತೀಶ್ ಭಟ್ ಎನ್ನುವವರು ವಿರುದ್ಧ ದೂರಿದ್ದ ಹಿನ್ನೆಲೆಯಲ್ಲಿ ಪೋಲಿಸರು ರಾತ್ರೋರಾತ್ರಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ.
ಆತ ಜಾಮೀನು ಪಡೆದು ಹೊರ ಬಂದವನೇ ಮನೆಯಲ್ಲಿ ಪತ್ರವನ್ನು ಬರೆದಿಟ್ಟು ನಾಪತ್ತೆಯಾಗಿರುವುದಾಗಿ ಆತನಿಗೆ ಸಂಭಂದಿಸಿದವರು ಪೋಲಿಸರಿಗೆ ದೂರು ನೀಡಿದ್ದಾರೆ. ಈ ಕುರಿತು ನುಡಿಸಿರಿ ವಾಹಿನಿ ಸ್ಥಳಕ್ಕೆ ಭೇಟಿ ನೀಡಿದಾಗ, ನೊಂದ ಮಹಿಳೆ ತಾನು ಕೆಲವು ತಿಂಗಳ ಹಿಂದೆ ಕವಲಕ್ಕಿಯ ಮನೆಯೊಂದರಲ್ಲಿ ಮನೆಗೆಲಸಕ್ಕೆ ಹೋಗುತ್ತಿದ್ದೆ. ಮನೆಯ ಮಹಡಿಯ ಮೇಲೆ ಕೆಲಸ ಮಾಡುತ್ತಿದ್ದಾಗ ಮನೆಯ ಮಾಲಿಕ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ ಪೋಟೋಗಳನ್ನು ತೆಗೆದಿದ್ದನು. ಮನೆಯ ಮಾಲಿಕ ಪದೇ ಪದೇ ಅಸಭ್ಯವಾಗಿ ವರ್ತಿಸುವುದಕ್ಕೆ ನಾನು ಅಲ್ಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದೆ. ಅಶ್ಲೀಲ ಪೋಟೊ ಕ್ಲಿಕ್ಕಿಸಿದ ಆತನ ಮೇಲೆ ಹಾಗೂ ಗೋಡೆಗಳಿಗೆ ಅದನ್ನು ಅಂಟಿಸಿದ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಮಾನ ಹೋಗಿದ್ದಕ್ಕಾಗಿ ಪರಿಹಾರ ಒದಗಿಸಿ ಕೊಡುವಂತೆ ಪೋಲಿಸ್ ಠಾಣೆಗೆ ದೂರು ನೀಡಿದ್ದೇನೆ ಎಂದಿದ್ದಾಳೆ.
ಇನ್ನೂ ಘಟನೆ ಕುರಿತು ನುಡಿಸಿರಿ ವಾಹಿನಿ ಸ್ಥಳಕ್ಕೆ ಭೇಟಿ ನೀಡಿದಾಗ ಆಟೋ ಚಾಲಕರು, ಸ್ಥಳೀಯರು ಮಾಹಿತಿ ನೀಡಲು ಹಿಂದೇಟು ಹಾಕಿರುವುದಯ ಕಂಡು ಬಂದಿದೆ. ಒಟ್ಟಿನಲ್ಲಿ ಈ ಕೃತ್ಯ ಎಸಗಿದವರು ಯಾರು ಇದರಲ್ಲಿ ದೂರಿತ್ತ ಮಹಿಳೆಯ ಪಾತ್ರವೇನು. ನಾಪತ್ತೆಯಾದವನ ಪಾತ್ರವೇನು ಎನ್ನುವುದು ಪೋಲಿಸ್ ತನಿಖೆ ಬಳಿಕ ತಿಳಿದು ಬರಬೇಕಿದೆ…