ಹೊನ್ನಾವರ, ಮಾರ್ಚ್ 18 : ತಾಲೂಕಿನ ಕಾಸರಕೋಡ್ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಬ್ರಹತ್ ಆಮೆ ಸಂಚಾರವಾಗಿರುವ ದ್ರಶ್ಯ ಕಂಡುಬಂದಿದೆ…
ಈ ಭಾಗದ ಕಡಲತೀರದಲ್ಲಿ ಪ್ರತಿ ವರ್ಷವೂ ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ಆಮೆಗಳು ತಮ್ಮ ಸಂತತಿ ಅಭಿವೃದ್ಧಿಗೋಸ್ಕರ ಮೊಟ್ಟೆ ಇಡುತ್ತವೆ. ಕಳೆದ ವರ್ಷ ಇದೇ ಅವಧಿಯಲ್ಲಿ 12ಕ್ಕೂ ಹೆಚ್ಚು ಕಡಲಾಮೆಗಳು ಇಲ್ಲಿನ ಕಡಲತೀರದಲ್ಲಿ ಇಟ್ಟಿರುವ ಸುಮಾರು 2000ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿತ್ತು. ಜತೆಗೆ ಅದರ ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತ ಬಂದಿದೆ.
ಕಡಲಾಮೆಗಳು ಮಹಾವಿಷ್ಣುವಿನ ಅಪರಾವತಾರ ಎನ್ನುವದು ಮೀನುಗಾರರ ನಂಬಿಕೆಯಾಗಿದ್ದು, ಕಡಲತೀರದಲ್ಲಿ ಮೊಟ್ಟೆ ಇಡುವ ಕಡಲಾಮೆಗಳನ್ನು ಮತ್ತು ಅವುಗಳ ಮೊಟ್ಟೆಗಳನ್ನು ಜತನದಿಂದ ಮತ್ತು ಪೂಜನೀಯ ಭಾವನೆಯಿಂದ ಸಂರಕ್ಷಣೆ ಮಾಡಿ ಮರಿಗಳನ್ನು ಪೂಜಿಸಿ ಸಮುದ್ರಕ್ಕೆ ಸೇರಿಸಿ ಸಂಭ್ರಮ ಪಡ್ತಾರೆ…
ಆಲಿವ್ ರೆಡ್ಲಿ ಜಾತಿಯ ಕಡಲಾಮೆಗಳು ಪೂರ್ವ ಕರಾವಳಿಯ ಓರಿಸ್ಸಾ ಕಡಲತೀರದಲ್ಲಿ ದಿನದ ಸಮಯದಲ್ಲಿ ಮೊಟ್ಟೆ ಇಡುವ ವಾಡಿಕೆ ಇದೆ. ಈ ಹಿಂದೆ ಡಿಸೆಂಬರ್‌ನಿಂದ ಮೇ ತಿಂಗಳ ಮೊದಲ ವಾರದಲ್ಲಿ ಪಶ್ಚಿಮ ಕರಾವಳಿಯಲ್ಲಿ ರಾತ್ರಿ ಸಮಯದಲ್ಲಿ ಮೊಟ್ಟೆ ಇಡುವ ವಾಡಿಕೆ ಇತ್ತು. ಕಾಸರಕೋಡ ಟೊಂಕದ ಸುತ್ತ ಮುತ್ತಲಿನ ಕಡಲತೀರದಲ್ಲಿ ಪ್ರತಿ ವರ್ಷ ಡಿಸೆಂಬರ್‌ನಿಂದ ಎಪ್ರಿಲ್ ಅವಧಿಯಲ್ಲಿ ಕಡಲಾಮೆಗಳು ಮೊಟ್ಟೆ ಇಡುವ ತಾಣಗಳಲ್ಲಿ ಒಂದು ಎನ್ನುವ ಪ್ರತೀತಿ ಇದೆ…