ಸಂಘದ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಸರ್ವ ಸದಸ್ಯರ ಸಹಕಾರ ಅತ್ಯಗತ್ಯ- ಸೂರ್ಯಕಾಂತ್ ಸಾರಂಗ

ಕುಂದಾಪುರ, ಮಾರ್ಚ್‌ 18 : ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಮಾಸಿಕ ಸಭೆ ಹಾಗೂ ನೂತನ ಆಡಳಿತ ಮಂಡಳಿಯ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆ ತ್ರಾಸಿಯ ಖಾರ್ವಿ ಸಭಾಭವನದಲ್ಲಿ ಭಾನುವಾರ ಜರುಗಿತು.

ಸಂಘದ ಅಧ್ಯಕ್ಷ ಮೋಹನ್ ಬಾನಾವಳಿಕರ ಅನಿವಾರ್ಯ ಕಾರಣಗಳಿಂದ ಸಭೆಗೆ ಭಾಗವಹಿಸಿರಲಿಲ್ಲ. ಹೀಗಾಗಿ ಅವರ ಸೂಚನೆ ಮೇರೆಗೆ ಸಭೆ ಅಧ್ಯಕ್ಷತೆವಹಿಸಿದ್ದ ಸಂಘದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಸಾರಂಗ, ಸರ್ವ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, ಋಣಾತ್ಮಕವಲ್ಲದ ಸಲಹೆ ಸೂಚನೆಗಳನ್ನು ತಮ್ಮಿಂದ ಅಪೇಕ್ಷಿಸಲಾಗುತ್ತಿದ್ದು, ಸಂಘದ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಸರ್ವ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ. ಮುಂದಿನ 3 ವರ್ಷಗಳ ಆಡಳಿತ ಅವಧಿಯಲ್ಲಿ ಸಂಘದ ಮೂಲ ಉದ್ದೇಶಗಳ ಈಡೇರಿಕೆಯ ಜೊತೆಗೆ ಒಂದು ಯಶಸ್ವಿ  ಸಂಘಟನೆಯನ್ನು ನಿರ್ಮಾಣ ಮಾಡೋಣ. ಇದರ ಜೊತೆಯಲ್ಲಿ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರುವ ಯೋಚನೆಯಿದ್ದು ಇದಕ್ಕೆ ಎಲ್ಲರ ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಕೃಷ್ಣ ತಾಂಡೇಲ್ ಹಿಂದಿನ ಮಹಾಸಭೆಯ ನಡುವಳಿಗಳನ್ನು ಓದಿ ದೃಢಿಕರಿಸಿದರು. ಖಜಾಂಚಿ ಜಿ.ಕೆ. ಶಿನ್ಹಾ ಕಳೆದ ತಿಂಗಳಿನ ಆಯವ್ಯಯ ಮಂಡಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಪ್ರಕಾಶ ಖಾರ್ವಿ, ರಾಘವೇಂದ್ರ ಕೋಟಾನ, ಉಮೇಶ ಮೇಸ್ತ ಹೊನ್ನಾವರ, ಅಶೋಕ ಕಾಸರಕೋಡ, ಪರಮೇಶ್ವರ ಮೇಸ್ತ, ಮಹೇಶ ಖಾರ್ವಿ ಸೊರಬ , ಮಾಧವ ಖಾರ್ವಿ ಕುಂದಾಪುರ, ಸದಾನಂದ ಖಾರ್ವಿ ಮದ್ದುಗುಡ್ಡೆ, ಅಣ್ಣಪಯ್ಯ ಖಾರ್ವಿ ಗಂಗೊಳ್ಳಿ, ರಮೇಶ್ ಖಾರ್ವಿ ಭಟ್ಕಳ, ಪರಮೇಶ್ವರ ಮೇಸ್ತ ಸಾಗರ, ಗೋವಿಂದ ತಾಂಡೇಲ  ಕಾಸರಕೋಡ, ನರಸಿಂಹ ಖಾರ್ವಿ, ಗಣೇಶ ಮೇಸ್ತ ಸಿದ್ದಾಪುರ ಮುಂತಾದವರು ಉಪಸ್ಥಿತರಿದ್ದರು.