Lok Sabha Election 2024 : ಚುನಾವಣೆ ಘೋಷಣೆಯಾಗಿದ್ದರೂ ನಿಮಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಇನ್ನೂ ಅವಕಾಶವಿದೆ. ಹಾಗಿದ್ದರೆ ಎಲ್ಲಿ? ಇಲ್ಲಿ ಓದಿ.
ಬೆಂಗಳೂರು, ಮಾರ್ಚ್ 16 : ನನಗೆ ಜಸ್ಟ್ 18 ವರ್ಷ ಆಗಿದೆ. ನಾನು ಇನ್ನೂ ಮತದಾರರ ಪಟ್ಟಿಯಲ್ಲಿ (Voter list) ಹೆಸರು ನೋಂದಣಿ ಮಾಡಿಕೊಂಡಿಲ್ಲ. ಹಾಗಿದ್ದರೆ ನನಗೆ ಈ ಬಾರಿಯ ಚುನಾವಣೆ (Lok Sabha Election 2024) ಮಿಸ್ ಆಗುತ್ತಾ? ಅಥವಾ ನಾನು ಇನ್ನೂ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆಯಾ? ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಸ್ಪಷ್ಟವಾದ ಉತ್ತರ ಇಲ್ಲಿದೆ.
ಚುನಾವಣೆ ಘೋಷಣೆಯಾದ ದಿನವಾದ ಮಾರ್ಚ್ 16ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬಿದ್ದರೆ ಅಂಥವರು ಈಗಲೂ ನೋಂದಣಿ (Registration in Voter list) ಮಾಡಿಕೊಳ್ಳಲು ಅವಕಾಶವಿದೆ. ಈ ಅವಕಾಶ ಆಯಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಅಧಿಸೂಚನೆ ಹೊರಡಿಸುವ 10 ದಿನಗಳ ಮೊದಲಿನವರೆಗೂ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು. ಮತದಾರರು ಫಾರಂ 8ನ್ನು ಸಲ್ಲಿಸಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದು ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ (Manoj Kumar meena) ತಿಳಿಸಿದ್ದಾರೆ.
ರಾಜ್ಯದಲ್ಲಿ ಮತದಾರರ ನೋಂದಣಿಗೆ ಯಾವಾಗ ಕೊನೆಯ ದಿನಾಂಕ?
ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಎರಡು ಹಂತಗಳಿಗೆ ನಾಮಪತ್ರ ಸಲ್ಲಿಕೆಗೆ ಎರಡು ಪ್ರತ್ಯೇಕ ದಿನಗಳಿವೆ. ಆ ದಿನಕ್ಕಿಂತ 10 ದಿನ ಮೊದಲಿನ ವರೆಗೆ ನೋಂದಣಿ ಮಾಡಿಕೊಳ್ಳಬಹುದು.