Mass Wedding : ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ಯೋಜನೆಯಿಂದ ಹಣ ಮತ್ತು ಉಡುಗೊರೆಗಳನ್ನು ಸಂಗ್ರಹಿಸಿ ನಂತರ ಏಳು ಹೆಜ್ಜೆ ಇಟ್ಟಿದ್ದಾಳೆ. ಗಮನಾರ್ಹವೆಂದರೆ ಅವಳು ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು. ಸದ್ಯ ಆಕೆಯ ಪತಿ ಜೀವನೋಪಾಯಕ್ಕಾಗಿ ಬೇರೆ ಪ್ರದೇಶದಲ್ಲಿ ನೆಲೆಸಿದ್ದಾರೆ.
ಮಹಾರಾಜಗಂಜ್, ಮಾರ್ಚ್ 19 : ಉತ್ತರ ಪ್ರದೇಶ ಸರ್ಕಾರ ತಂದಿರುವ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆ ಪುಣ್ಯವೋ ಎಂಬಂತೆ ಪ್ರತಿದಿನ ಅಲ್ಲಿ ಒಂದಿಲ್ಲೊಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಈ ಯೋಜನೆಯ ಲಾಭ ಪಡೆಯಲು ಅಣ್ಣಾ ತಂಗಿಯರು ಒಟ್ಟಿಗೆ ಮದುವೆಯಾಗಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿವರಗಳಿಗೆ ಹೋಗುವುದಾದರೆ..
ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಯೋಗಿ ಆದಿತ್ಯನಾಥ್ ಸರ್ಕಾರ ವತಿಯಿಂದ ಮಾರ್ಚ್ 5 ರಂದು ಮಹಾರಾಜ್‌ಗಂಜ್ ಜಿಲ್ಲೆಯ ಲಕ್ಷ್ಮೀಪುರ ಬ್ಲಾಕ್‌ನಲ್ಲಿ 38 ಹಿಂದುಳಿದ ಕುಟುಂಬಗಳ ಜೋಡಿಗಳನ್ನು ವಿಧ್ಯುಕ್ತವಾಗಿ ವಿವಾಹವಾದರು. ಈ ಯೋಜನೆಯಡಿ ನವದಂಪತಿಗಳಿಗೆ ಗೃಹೋಪಯೋಗಿ ವಸ್ತುಗಳು ಹಾಗೂ ರೂ. 35 ಸಾವಿರ ನಗದು ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯಲು ಕೆಲವು ಮಧ್ಯವರ್ತಿಗಳು ಆಗಾಗ್ಗೆ ಹಗರಣಗಳನ್ನು ಎಬ್ಬಿಸುತ್ತಿರುತ್ತಾರೆ.
ಇತ್ತೀಚೆಗೆ, ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ಯೋಜನೆಯಿಂದ ಹಣ ಮತ್ತು ಉಡುಗೊರೆಗಳನ್ನು ಸಂಗ್ರಹಿಸಿ ನಂತರ ಏಳು ಹೆಜ್ಜೆ ಇಟ್ಟಿದ್ದಾಳೆ. ಗಮನಾರ್ಹವೆಂದರೆ ಅವಳು ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು. ಸದ್ಯ ಆಕೆಯ ಪತಿ ಜೀವನೋಪಾಯಕ್ಕಾಗಿ ಬೇರೆ ಪ್ರದೇಶದಲ್ಲಿ ನೆಲೆಸಿದ್ದಾರೆ.
ಇದರೊಂದಿಗೆ ಮಧ್ಯವರ್ತಿಗಳು ಸ್ಕೀಮ್ ಪ್ರಯೋಜನ ಪಡೆಯಲು ಮತ್ತೆ ಮದುವೆಯಾಗುವಂತೆ ಮನವೊಲಿಸಿದರು. ಮದುವೆಯ ದಿನ ಸಾಮೂಹಿಕ ವಿವಾಹಗಳು ನಡೆಯುತ್ತಿದ್ದ ಫಂಕ್ಷನ್ ಹಾಲ್ ಗೆ ಪೂರ್ವ ನಿಯೋಜಿತವಾಗಿ ವರಮಹಾಶಯ ಬಂದಿರಲಿಲ್ಲ.
ಮಧ್ಯವರ್ತಿಗಳು ವಧುವಿನ ಸ್ವಂತ ಸಹೋದರನನ್ನು ವರನ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮನವೊಲಿಸಿದರು. ಸಂಪ್ರದಾಯದ ಪ್ರಕಾರವೇ ಅಕ್ಕ–ತಮ್ಮನಿಗೆ ಮದುವೆ ನಡೆಯಿತು. ಆದರೆ ಮಾಹಿತಿ ಸಿಕ್ಕ ಕೂಡಲೇ ಅಧಿಕಾರಿಗಳು ಎಚ್ಚೆತ್ತರು. ಮಹಾರಾಜಗಂಜ್‌ನ ಪ್ರದೇಶಾಭಿವೃದ್ಧಿ ಅಧಿಕಾರಿಗಳು (ಬಿಡಿಒ) ದಂಪತಿಗೆ ನಿಗದಿಪಡಿಸಿದ ಪೀಠೋಪಕರಣಗಳು ಮತ್ತು ಹಣವನ್ನು ಹಿಂಪಡೆದಿದ್ದಾರೆ.
ಈ ಘಟನೆ ಜಿಲ್ಲಾಡಳಿತದ ಗಮನಕ್ಕೆ ಬಂದಾಗ ಈ ನಕಲಿ ಮದುವೆ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುನಯ್ ಝಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.