ಸಕ್ಕರೆಯಲ್ಲಿ ಮಿಂದೆದ್ದ ಗೋಕರ್ಣದ ಮಹಾಬಲೇಶ್ವರ ಮತ್ತು ಮಹಾಗಣಪತಿ

ಗೋಕರ್ಣ : ದಕ್ಷಿಣ ಕಾಶಿ ಎನಿಸಿಕೊಂಡಿರುವ ಪುರಾಣ ಪ್ರಸಿದ್ಧ ಗೋಕರ್ಣ ದೇವಸ್ಥಾನದಲ್ಲಿ ಮಹಾಬಲೇಶ್ವರನಿಗೆ ಮತ್ತು ಮಹಾಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯ್ತು. ವಿಶೇಷ ಅಂದ್ರೆ ಈ ಬಾರಿ ಮಹಾಬಲ ಮತ್ತು ಮಹಾಗಣಪತಿ ಸಕ್ಕರೆಯಲ್ಲಿ ಮಿಂದೆದ್ದಿದ್ದು ವಿಶೇಷವಾಗಿತ್ತು…


ಗೋಕರ್ಣದಲ್ಲಿ ಸಕ್ಕರೆ ಸೇವೆ ಹಲವು ವಿಶೇಷತೆಯನ್ನು ಪಡೆದುಕೊಂಡಿದೆ. ಮಹಾಗಣಪತಿ ಸಕ್ಕರೆ ಸೇವೆ ಐದೂವರೆ ಕ್ವಿಂಟಲ್ ಸಕ್ಕರೆಯನ್ನು ನೈವೈದ್ಯದ ರೂಪದಲ್ಲಿ ಅರ್ಪಿಸಿದ್ರೆ, ಮಹಾಬಲನಿಗೆ ಎರಡೂವರೆ ಕ್ವಿಂಟಲ್‌ ಸಕ್ಕರೆಯನ್ನು ಸಮರ್ಪಿಸಲಾಯ್ತು.

ಗಣಪತಿಯ ಕುತ್ತಿಗೆ ಸುತ್ತ ಸ್ಟೀಲ್‌ ಕಣಗವನ್ನಿಟ್ಟು ಸಕ್ಕರೆ ತುಂಬಿಸಿ ಪೂಜೆ ಸಲ್ಲಿಸಲಾಯ್ತು. ಇನ್ನು ಮಹಾಬಲೇಶ್ವರನಿಗೆ ಕಟ್ಟೆ ಕಟ್ಟಿ ಅದ್ರಲ್ಲಿ ಸಕ್ಕರೆ ಸುರಿದು, ಅದರ ಮೇಲೆ ಮಂಟಪ ಕಟ್ಟಿ ಈಶ್ವರನ ಮೂರ್ತಿ ಇಟ್ಟು ಅಲಂಕಾರ ಮಾಡಿ ಪೂಜೆ ಮಾಡಲಾಯ್ತು…

ಇನ್ನು ಸಕ್ಕರೆ ಸೇವೆಯಲ್ಲದೇ ಗೋಕರ್ಣದ ಮಹಾಬಲ ಮತ್ತು ಮಹಾಗಣಪತಿಗೆ ಬೆಲ್ಲದ ಉಂಡೆ ಸೇವೆಯನ್ನು ಸಲ್ಲಿಸಲಾಗುತ್ತೆ. ಮತ್ತೊಂದು ವಿಶೇಷವಂದ್ರೆ ಮಾರ್ಚ್‌ 1 ರಂದು ಮಹಾಗಣಪತಿಗೆ ಮಾತ್ರ, ಇಡ್ಲಿ ಕೊಟ್ಟೆ ಕಡುಬು ಸೇವೆ ಸಲ್ಲಿಸಲಾಗುತ್ತದೆ. ಇಡ್ಲಿ ಕೊಟ್ಟೆ ಕಡುಬು ಸೇವೆಗೆ, 1 ಕ್ವಿಂಟಲ್‌ ಅಕ್ಕಿ, 60 ಕೇಜಿ ಉದ್ದನ್ನು ರಾತ್ರ ನೆನೆಸಿಟ್ಟು, ಬೆಳಗ್ಗೆ ವೈದಿಕರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಬೀಸಿ ಬೇಯಿಸಿ ಇಡ್ಲಿ ಕೊಟ್ಟೆ ಕಡುಬನ್ನು ಮಹಾಗಣಪತಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತೆ. ಇದ್ರಲ್ಲಿ ಇಂತಿಷ್ಟು ಪಾಲು ವೈದಿಕರಿಗೆ ಮತ್ತು ಇಂತಿಷ್ಟು ಪಾಲ ಸೇವೆ ಮಾಡಿದವರಿಗೆ ಎಂದು ನಿಗದಿಪಡಿಸಲಾಗಿರುತ್ತದೆ…