ಸಿದ್ದಾಪುರದಲ್ಲಿ ನಿವೃತ್ತ ನೌಕರರಿಂದ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಹಾಗೂ ಆರೋಗ್ಯ ತಪಾಸಣೆ ಶಿಬಿರ

ಸಿದ್ದಾಪುರ : ನಿವೃತ್ತ ನೌಕರರಿಂದ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ನವಂಬರ್ 7ರ ಮಂಗಳವಾರ ಪಟ್ಟಣದ ಬಾಲ ಭವನದಲ್ಲಿ ನಡೆಯಲಿದೆ ಎಂದು ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಿ ಎಸ್ ಗೌಡ ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕಾರ್ಯಕ್ರಮವನ್ನು ತಹಶೀಲ್ದಾರ್ ಎಮ್ ಆರ್ ಕುಲಕರ್ಣಿ ಅವರು ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಇ. ಒ ದೇವರಾಜ್ ಹಿತ್ಲಕೊಪ್ಪ, ಬಿ. ಇ. ಒ. ಜಿ. ಐ ನಾಯ್ಕ್ ಧನ್ವಂತರಿ ಕಾಲೇಜಿನ ಪ್ರಾಚಾರ್ಯೆ ಡಾ ರೂಪ ಭಟ್, ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್. ನಾಯ್ಕ್, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಮಿಥುನ್ ನಾಯ್ಕ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರೋಹಿತ್ ಉಪಸ್ಥಿತರಿರುತ್ತಾರೆ ತಾಲೂಕಿನ ಎಲ್ಲ ನಿವೃತ್ತ ನೌಕರರು ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಏನ್. ವಿ ಹೆಗಡೆ . ವಿ .ಎಸ್ .ಶೇಟ್ . ಐ .ಕೆ .ನಾಯ್ಕ್ . ಜಿ .ಎಚ್ .ತಳವಾರ್ ಉಪಸ್ಥಿತರಿದ್ದರು.