ಯಲ್ಲಾಪುರ ಬಸ್​ ನಿಲ್ದಾಣದಲ್ಲಿ ಮಹಿಳೆಯ ಬಟ್ಟೆ ಹರಿದು ಹಲ್ಲೆ: ದೂರು ದಾಖಲಿಸಿಕೊಳ್ಳದ ಪೊಲೀಸರು

ಉತ್ತರ ಕನ್ನಡ, ಫೆ.23: ನಡುರಸ್ತೆಯಲ್ಲೇ ಮಹಿಳೆಯ ಬಟ್ಟೆ ಹರಿದು ನಾಲ್ವರ ಮಹಿಳೆಯರು ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ(Uttara Kannada) ಜಿಲ್ಲೆಯ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಫೆಬ್ರವರಿ 5 ರಂದು ನಡೆದಿದೆ. ಇನ್ನು ಹಲ್ಲೆ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಲು ಮಹಿಳೆ ಹರಿದ ಬಟ್ಟೆಯಲ್ಲೇ ಠಾಣೆಗೆ ಹೋಗಿದ್ದಾರೆ. ಆದರೆ, ಇದು ಸಣ್ಣ ಕೇಸ್​ ಎಂದು ಯಲ್ಲಾಪುರ ಪೊಲೀಸರು ಕೇಸ್​ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ನೊಂದ ಮಹಿಳೆ ರಾಜೇಶ್ವರಿ, ಕಣ್ಣೀರು ಹಾಕಿದ್ದಾರೆ.

ಪ್ರೆಬ್ರವರಿ 20 ರಂದು ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಒತ್ತಾಯದಿಂದ ಕೇಸ್​ ದಾಖಲು

ಇನ್ನು ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಒತ್ತಾಯದಿಂದ ಫೆಬ್ರವರಿ 20 ರಂದು ಕೇಸ್ ದಾಖಲು ಮಾಡಲಾಗಿದೆ. ಆದ್ರೆ, ಇದುವರೆಗೂ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ರಕ್ಷಣೆ ಬೇಕು, ನನಗೆ ನ್ಯಾಯ ಬೇಕೆಂದು ಕೈ ಮುಗಿದು  ನೊಂದ ಮಹಿಳೆ ರಾಜೇಶ್ವರಿ ಕಣ್ಣಿರು ಹಾಕಿದ್ದಾರೆ.

ಸಿದ್ಧಿ ಸಮಾಜದ ದಮಾಮಿ ಹೋಮ್ ಸ್ಟೇ ಅವ್ಯವಹಾರ ಪ್ರಶ್ನಿಸಿದಕ್ಕೆ ಹಲ್ಲೆ

ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗದಬೈಲ್​ ಗ್ರಾಮದಲ್ಲಿ ಸಿದ್ಧಿ ಸಮಾಜದ ದಮಾಮಿ ಹೋಮ್ ಸ್ಟೇ ರೂಪುಗೊಂಡಿದೆ. ಇದರ ಅವ್ಯವಹಾರವನ್ನು ರಾಜೇಶ್ವರಿ ಅವರು ಆರ್ ಟಿ ಐ ದಿಂದ ಮಾಹಿತಿ ಕೇಳಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಸಿದ್ದಿ ಸಮಾಜದ ಸಾಮಾಜಿಕ ಕಾರ್ಯಕರ್ತೆ,  ಈ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.  ಸದ್ಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ರಾಜೇಶ್ವರಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.