ಮತ್ತೊಮ್ಮೆ ಮೋದಿ 2024 : ಕಾರವಾರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಮತಿ ರೂಪಾಲಿ ಎಸ್. ನಾಯ್ಕ

‌ಕಾರವಾರ : ಕಾರವಾರ ನಗರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ‌ ಮತ್ತೊಮ್ಮೆ ಮೋದಿ 2024 ಗೋಡೆ ಬರಹ ಅಭಿಯಾನಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್.‌ ನಾಯ್ಕ ಅವರು ಚಾಲನೆ ನೀಡಿದ್ರು..

ರೂಪಾಲಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಗರ ಅಧ್ಯಕ್ಷ ನಾಗೇಶ ಕುರಡೇಕರ್ ನೇತೃತ್ವದಲ್ಲಿ ‌ಮತ್ತೊಮ್ಮೆ ಮೋದಿ 2024 ಗೋಡೆ ಬರಹ ಕಾರ್ಯಕ್ರಮವನ್ನು ಶ್ರೀ ಸಾತೆರಿ ದೇವಿಗೆ ಪೂಜೆ ಮಾಡುವ ಮೂಲಕ  ಸುಂಕೇರಿ ಮೂರು ದೇವಸ್ಥಾನದ ಹತ್ತಿರ ಮತ್ತೊಮ್ಮೆ ಮೋದಿಜಿ ಗೋಡೆ ಬರಹಕ್ಕೆ ಚಾಲನೆ ನೀಡಲಾಯ್ತು…

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ್  ಅವರು, ಇಂದು ದೇಶಕ್ಕೆ ಮೋದಿಜಿಯವರ ಕೊಡುಗೆ ಅಪಾರ. ಅಭಿವೃದ್ಧಿ ಪಥದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಆಗಲಿ ಅವರು ಮಾಡಿದ ಸಾಧನೆ ಅಪಾರ. ಹೀಗಾಗಿ ಮೋದಿಜಿ ಮತ್ತೊಮ್ಮೆ ಪ್ರಧಾನ ಮಂತ್ರಿಗಳಾಗಬೇಕು. ನಮ್ಮ ರಾಜ್ಯದ 28 ಸಂಸದರನ್ನು ಅತಿ ಹೆಚ್ಚು ಮತಗಳಿಂದ ಆರಿಸಿ ತರಬೇಕು ಎಂದು ಹೇಳಿದ್ರು…

ನಂತರ ಕಾರವಾರ ಮೀನು ಮಾರ್ಕೆಟ್‌ನಲ್ಲಿರುವ ಬಿಜೆಪಿ ನಗರಸಭೆ ಸದಸ್ಯರ ಅಂಗಡಿ ಗೋಡೆಯಲ್ಲಿ ಮತ್ತೊಮ್ಮೆ ಮೋದಿಜಿ ಗೋಡೆ ಬರಹ ಬರೆಯಲಾಯ್ತು. ಈ ಸಂದರ್ಭದಲ್ಲಿ ಕಾರ್ಯಕರ್ತರು ಭಾರತ ಮಾತೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈ ಕಾರ್ ಹಾಕಿದ್ರು…

ಈ ಅಭಿಯಾನದಲ್ಲಿ ಮತ್ತೊಮ್ಮೆ ಮೋದಿ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ರಾಜೇಂದ್ರ ನಾಯ್ಕ್, ಸ್ಥಾಯಿ ಸಮಿತಿ ಸದಸ್ಯ ಮನೋಜ್ ಬಾಂದೇಕರ್, ನಗರಸಭೆ ಸದಸ್ಯರು, ಮಹಿಳಾ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು…