ಅಂಕೋಲಾದಲ್ಲಿ ಸಿಪಿಐ ಸಂತೋಷ ಶೆಟ್ಟಿ ಅವರಿಗೆ ಅಭೂತಪೂರ್ವ ನಾಗರೀಕ ಸನ್ಮಾನ

ಅಂಕೋಲಾ : ಅಧಿಕಾರಿಗೆ ಇರಬೇಕಾದ ಗತ್ತು ಗಮ್ಮತ್ತು ಜೊತೆಯಲ್ಲಿ ಮಾನವೀಯ ಮೌಲ್ಯಗಳ ಮಿಶ್ರಣವೇ ಸಿಪಿಐ ಸಂತೋಷ ಶೆಟ್ಟಿ. ಶಾಂತಿಯ ಜೊತೆ ಸೌಹಾರ್ದತೆ ಅಂಕೋಲಾದ ಗುಣ. ಈ ಗುಣಗಳನ್ನು ಆದರ್ಶವಾಗಿ ಇಮ್ಮಡಿಗೊಳಿಸಿದವರು ಅವರು ಎಂದು ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾವನದಲ್ಲಿ ಶುಕ್ರವಾರ ತಾಲ್ಲೂಕಿನ ಜನಮೆಚ್ಚುಗೆಯ ಸಿಪಿಐ ಸಂತೋಷ ಶೆಟ್ಟಿ ಅವರ ವರ್ಗಾವಣೆಯ ನಿಮಿತ್ತ ಹಮ್ಮಿಕೊಂಡ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಸಮಾಜದಲ್ಲಿ ಒಳ್ಳೆಯ ಹೆಸರುಗಳಿಸುವುದು ಬಹಳ ಕಷ್ಟವಾಗಿದೆ. ಆದರೆ ನಾಗರೀಕ ಸನ್ಮಾನ ಪಡೆಯುವಷ್ಟರ ಮಟ್ಟಿಗೆ ಹೆಸರು ಗಳಿಸಿರುವುದೇ ಒಬ್ಬ ಅಧಿಕಾರಿಯ ಹೆಗ್ಗಳಿಕೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದು ಇಲ್ಲ ಎಂದರು.

ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಅನೇಕ ಹಲವಾರು ಗಂಭೀರ ಸ್ವರೂಪದ ಪ್ರಕರಣಗಳನ್ನು ಅಸಾಧ್ಯ ಎನ್ನುವ ರೀತಿಯಲ್ಲಿ ಭೇದಿಸಿ ತಾಲ್ಲೂಕಿನ ಹಿರಿಮೆಯ ಜೊತೆಗೆ ಶಾಂತಿ ಸೌಹಾರ್ದತೆಗೆ ಕೊಡುಗೆ ನೀಡಿದವರು ಸಂತೋಷ ಶೆಟ್ಟಿ ಅವರು ಎಂದರು.
ಉದ್ಯಮಿ ಮಂಗಲದಾಸ ಕಾಮತ್, ಉಪನ್ಯಾಸಕ ನವೀನ ದೇವರಭಾವಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ,ನಿವೃತ್ತ ಉಪನ್ಯಾಸಕ ಶಿವಾನಂದ ನಾಯಕ, ಉದ್ಯಮಿ ಸುರೇಶ ನಾಯಕ, ಚಿಂತಕ ಮಹಾಂತೇಶ ರೇವಡಿ, ಬಿಜೆಪಿಯ ಪ್ರಶಾಂತ ನಾಯಕ, ಉದಯ ನಾಯಕ, ವಿಜಯಕುಮಾರ ನಾಯ್ಕ, ನಾಗನಂದ ಬಂಟ್ ಮಾತನಾಡಿದರು.
ಹಿರಿಯ ಉಪನ್ಯಾಸಕ ಮಹೇಶ ನಾಯಕ, ನಾಟಿ ವೈದ್ಯ ಹನುಮಂತ ಗೌಡ, ಪ್ರಾಚಾರ್ಯ ವಿನಾಯಕ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಜಗದೀಶ ನಾಯಕ ಹೋಸ್ಕೇರಿ, ಉಮೇಶ ನಾಯ್ಕ, ಕಾರ್ಯಕ್ರಮದ ಪ್ರಮುಖ ಆಯೋಜಕ ಪುಟ್ಟು ಬೊಮ್ಮಿಗುಡಿ ಸೇರಿದಂತೆ ವಿವಿಧ ಸಂಘಟನೆಗಳ, ಸಮುದಾಯ, ಪಕ್ಷಗಳ ಮುಖಂಡರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಉಪನ್ಯಾಸಕರು ಸೇರಿದಂತೆ ನೂರಾರು ಜನರು ಸಿಪಿಐ ಸಂತೋಷ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಪತ್ರಕರ್ತ ಸುಭಾಸ್ ಕಾರೇಬೈಲ್ ಸ್ವಾಗತಿಸಿ ನಿರ್ವಹಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ವಂದಿಸಿದರು.