ಅಂಕೋಲಾ ತಂಡ ಬೋಧನಾ ಶಿಬಿರದ ಸಮಾರೋಪ ಸಮಾರಂಭ

ಅಂಕೋಲಾ: ಹದಿಹರೆಯದ ಮಕ್ಕಳ ಚಂಚಲ ಸ್ವಭಾವ ಅರಿತುಕೊಂಡು ಹಾಗೂ ತರಗತಿಯಲ್ಲಿರುವ ವಿಭಿನ್ನ ಮಾದರಿಯ ಮಕ್ಕಳ ವ್ಯತ್ಯಾಸಗಳನ್ನು ಗುರುತಿಸಿಕೊಂಡು ಧನಾತ್ಮಕವಾಗಿ ಅವರನ್ನು ಪ್ರೇರೇಪಿಸಿ ನಿಯಂತ್ರಣದಲ್ಲಿ ಇಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವವನ್ನು ಬೆಳೆಸಬಹುದು ಹಾಗೂ ಶಿಕ್ಷಕರು ಸ್ವತ: ಶಿಸ್ತು ಸಂಯಮ ಶ್ರದ್ಧೆಗಳನ್ನು ಬೆಳೆಸಿಕೊಳ್ಳಬೇಕುಅಲ್ಲದೆ ಮಕ್ಕಳ ಮಟ್ಟಕ್ಕೆ ಇಳಿದು ಬೋಧಿಸುವ ಮೂಲಕ ಜ್ಞಾನ ಬೆಳೆಸಲು ಪ್ರಯತ್ನಿಸಬೇಕು ಎಂದು ವಿ.ಕೆ.ಪ್ರೌಢಶಾಲೆಯ ಮುಖ್ಯೋಧ್ಯಾಪಕಿ ನಾಗಮ್ಮ ಆಗೇರ ಹೇಳಿದರು.
ಅವರು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ತಂಡ ಬೋಧನಾ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಮೃದ್ಧಿ ಹಸ್ತಪತ್ರಿಕೆ ಬಿಡುಗಡೆಯ ಸಮಾರಂಭದಲ್ಲಿ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಮಕ್ಕಳು ಕಲಿಕೆಯ ಛಲ ಬೆಳೆಸಿಕೊಂಡು ಶಿಸ್ತಿನಿಂದ ಕಲಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆ ಪರಸ್ಪರ ಪ್ರತ್ಯಾ ರೋಪಗಳಿಲ್ಲದೆ ಸ್ವಂತ ತಿಳುವಳಿಕೆಯಿಂದ ಸಾಧಿಸಲೇಬೇಕೆಂಬ ಹಟದಿಂದ ಪ್ರಯತ್ನ ಪಟ್ಟಾಗ ನಮ್ಮ ಕಾರ್ಯ ಯಶಸ್ವಿಯಾಗುವುದು ಹಾಗೂ ಶಿಕ್ಷಕರು ನೀಡುವ ಪ್ರೋತ್ಸಾಹವನ್ನು ನಿರಾಕರಿಸದೆ ಶ್ರದ್ಧೆಯಿಂದ ಪಾಲಿಸಿದಲ್ಲಿ ಸಾಧಕರಾಗುವವರು ಎಂದರು.
ಕಾರ್ಯಕ್ರಮದಲ್ಲಿ ವಿ.ಕೆ .ಹೈಸ್ಕೂಲಿನ ಅಧಿಶ್ರೀ ಸಂಗಡಿಗರು ಪ್ರಾರ್ಥಿಸಿದರು. ತಂಡ ಬೋಧನಾ ಶಿಬಿರದ ಮುಖ್ಯೋಪಾಧ್ಯಾಯಿನಿ ಪ್ರಶಿಕ್ಷಣಾರ್ಥಿ ನಿಕಿತಾ ನಾಯಕ ಸ್ವಾಗತಿಸಿದರು. ಕುಮಾರಿ ಯುಕ್ತ ನಾಯಕ ಪರಿಚಯಿಸಿದರು. ಕುಮಾರಿ ಜ್ಯೋತಿ ಗೌಡ ವರದಿ ವಾಚಿಸಿದರು. ಬಹುಮಾನ ವಿತರಣಾ ಯಾದಿಯನ್ನು ರಂಜನಾ ನಾಯ್ಕ ಹಾಗೂ ಹರ್ಷಿತಾ ನಾಯ್ಕ ಪ್ರಸ್ತುತಪಡಿಸಿದರು ಪ್ರಶಿಕ್ಷಣಾರ್ಥಿಗಳಾದ ಶಿವಾನಂದ ಗುಂಜಲ, ಭರತ್ ಗೌಡ ಉಮೇಶ ಗೌಂಡಿ ರಾಜೇಶ್ವರಿ ಹಿರೆಗಂಗೆ ಹಾಗೂ ಶಿಕ್ಷಕರಾದ ಸಂತೋಷ ಅಡಿಗುಂಡಿ ಅನಿಸಿಕೆ ವ್ಯಕ್ತಪಡಿಸಿದರು ತಂಡ ಬೋಧನಾ ಶಿಬಿರದ ಇನ್ನೋರ್ವ ಮುಖ್ಯೋಪಾಧ್ಯಯಿನಿ ಸಾಕ್ಷಿ ನಾಯಕ ವಂದಿಸಿದರು. ಅನುಪಮ ಆಗೇರ ನಿರೂಪಿಸಿದರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.