ಸುಬ್ರಾಯ ವಾಳ್ಕೆಯವರ ಆತಿಥ್ಯದಲ್ಲಿ ಕಾಸರಗೋಡು ಚಿನ್ನಾ ಅವರ 150 ನೆಯ ಘರ್ ಘರ್ ಕೊಂಕಣಿ ಕಾರ್ಯಕ್ರಮ.

ಖ್ಯಾತ ಚಲನ ಚಿತ್ರ ನಟ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹಿಂದಿನ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರ ಸಾರಥ್ಯದಲ್ಲಿ ಫೆಬ್ರುವರಿ 4 ರ ಭಾನುವಾರ150 ನೇ ಘರ್ ಘರ್ ಕೊಂಕಣಿ ಕಾರ್ಯಕ್ರಮವು ಕುಮಟಾದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರ ಆತಿಥ್ಯದಲ್ಲಿ ನೆರವೇರಲಿದೆ.

ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ಈ ನಿಮಿತ್ತ ವಿಶೇಷ ಕೊಂಕಣಿ ಮನೊರಂಜನಾ ಕಾರ್ಯಕ್ರಮ ಜರುಗಲಿದ್ದು
ಅಪರಾಹ್ನ 3.30 ಕ್ಕೆ
ಕಲ್ಪತರು ಸೇವಾ ಪ್ರತಿಷ್ಠಾನ ಕುಮಟಾ ಇದರ ಅಧ್ಯಕ್ಷರಾದ ಹನುಮಂತ ಕೆ ಶಾನಭಾಗ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ ಡಿ ಶೇಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಬಳಿಕ ಕೊಂಕಣಿ ಭಾಷಿಕ ವಿವಿಧ ಸಮುದಾಯದ ವತಿಯಿಂದ ಮನರಂಜನಾ ಕಾರ್ಯಕ್ರಮಗಳು ನೆರವೇರಲಿದೆ. ಇದೇ ವೇದಿಕೆಯಲ್ಲಿ
ಸಂಜೆ 5.30 ರಿಂದ ಸಭಾಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಪರಿಷದ್ ಕುಮಟಾ ಇದರ ಉಪಾಧ್ಯಕ್ಷರಾದ ಮುರಳೀಧರ ಪ್ರಭು ವಹಿಸಲಿದ್ದು
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ದಿನಕರ ಶೆಟ್ಟಿ
ವಿಧಾನ ಪರಿಷದ್ ಸದಸ್ಯ ಶಾಂತಾರಾಮ ಸಿದ್ದಿ,
ಮಾಜಿ ಶಾಸಕಿ ರೂಪಾಲಿ ನಾಯಕ,
ಮಹೇಶ ಠಾಕೂರ್,ದೀಪಕ ಶೇಟ್ ಉಡುಪಿ,
ಮೊದಲಾದವರು ಪಾಲ್ಹೊಳ್ಳಲಿದ್ದಾರೆ.
ಕಾರ್ಯಕ್ರಮದ ರೂವಾರಿಗಳಾದ ಕಾಸರಗೋಡು ಚಿನ್ನಾ ಇವರ ವಿಶೇಷ ಆಶಯ ನುಡಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈಯುತ್ತಿರುವ ಕೊಂಕಣಿ ಭಾಷಿಕರನ್ನು ಸನ್ಮಾನಿಸುವುದು ಕಾರ್ಯಕ್ರಮದ ವಿಶೇಷತೆ ಆಗಿದೆ.

ಮುಂಜಾನೆ ಸುಬ್ರಾಯ ವಾಳ್ಕೆ ಅವರ ಸ್ವಗೃಹದಲ್ಲಿ ಕಾಸರಗೋಡು ಚಿನ್ನಾ ಅವರು ಘರ್ ಘರ್ ಕೊಂಕಣಿ ಕಾರ್ಯವನ್ನು ಸಾಂಕೇತಿಕವಾಗಿ ಉದ್ಘಾಟಿಸಲಿದ್ದು.
ವಿನೋದ ಪ್ರಭು ಹೆಗಡೆ.ಧೀರೂ ಶಾನಭಾಗ ,ಡಾಕ್ಟರ್ ಎಂ ವಿ ಮೂಡಲಗಿರಿ ,ಆನಂದು ನಾಯಕ ,ಪ್ರೀತಿ ಭಂಡಾರಕರ್ ಪಲ್ಲವಿ ಮಡಿವಾಳ, ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಕೊಂಕಣಿ ಭಾಷಿಕ ವಿವಿಧ ಸಮುದಾಯಗಳ ಸಂಗಮದ ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಿ ಕೊಡಬೇಕೆಂದು
ಸುಬ್ರಾಯ ವಾಳ್ಕೆ ಹಾಗೂ ಈ ಕಾರ್ಯಕ್ರಮದ ಸಂಯೋಜಕ ಕಾಗಾಲ ಚಿದಾನಂದ ಭಂಡಾರಿ ವಿನಂತಿಸಿದ್ದಾರೆ.