ಶ್ರೀ.ಯಲ್ಲಾಲಿಂಗ ಶಾಖಾ‌ ಮಠದಲ್ಲಿ ಸನ್ಮಾನ ಕಾರ್ಯಕ್ರಮ

ದಾಂಡೇಲಿ : ನಗರದ ಸಮೀಪದಲ್ಲಿರುವ ಸದ್ಗುರು ಶ್ರೀ.ಯಲ್ಲಾಲಿಂಗ ಮಹಾರಾಜರ ಶಾಖಾ ಮಠದ ಅಭಿವೃದ್ಧಿ ಮತ್ತು ಶಾಖಾ ಕಟ್ಟಡದ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದವರನ್ನು ಗೌರವಿಸುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಮಠದ ಪೂರ್ಣ ಉಸ್ತುವಾರಿಯನ್ನು ವಹಿಸಿರುವ ಅಮೋಗಿ ಮದರಿ, ಮಠದ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಸದಾ ಶ್ರಮಿಸುತ್ತಿರುವ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಸುಭಾಷ ಭೋವಿವಡ್ಡರ, ಹಿರಿಯರಾದ ಶಿವಲಿಂಗಪ್ಪ ಶಾಬಾದಿ ಹಾಗೂ ಶಾಮ ಶಾಖಪೂರಿ ಇವರನ್ನು ಮಠದ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮಂತ ಮದರಿ, ಮದನ ಹಲವಾಯಿ, ಬಸಪ್ಪ ಶಾಬಾದಿ, ಮಲಕಪ್ಪ ಬೋರಗಿ, ಯಲ್ಲಪ್ಪ ಭಾವಿಕಟ್ಟಿ ಮತ್ತು ಈರಯ್ಯ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.