ಪರಿಶ್ರಮದಿಂದ ಅತ್ಯಂತ ಶ್ರೇಷ್ಠ ಸಾಧನೆ ಸಾಧ್ಯ : ಶಿವಾನಂದ ಕಟಗಿ

ದಾಂಡೇಲಿ : ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾದ ಘಟ್ಟ ವಿದ್ಯಾರ್ಥಿ ಜೀವನ. ವಿದ್ಯಾರ್ಥಿಗಳು ಭವಿಷ್ಯದ ಉನ್ನತಿಗಾಗಿ ಯೋಗ್ಯ ಗುರಿಯನ್ನಿಟ್ಟು, ಸತತ ಪರಿಶ್ರಮಿಗಳಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು, ಸತತವಾದ ಪರಿಶ್ರಮದಿಂದ ಶ್ರೇಷ್ಟ ಸಾಧನೆಯನ್ನು ಮಾಡಲು ಸಾಧ್ಯ ಎಂದು ಡಿ.ವೈ.ಎಸ್.ಪಿ ಶಿವಾನಂದ ಕಟಗಿ ನುಡಿದರು.

ಅವರು ದಾಂಡೇಲಿಯ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಹಿದಾ ಪಠಾಣ ಲಯನ್ಸ್ ಸಂಸ್ಥೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಗೌರವ ಅತಿಥಿಗಳಾಗಿ ಮಾತನಾಡಿದ ನಗರಸಭೆಯ ಸದಸ್ಯ ಮೋಹನ ಹಲವಾಯಿ ಅಲ್ಪಾವಧಿಯಲ್ಲಿ ಲಯನ್ಸ್ ಶಾಲೆ ನಗರದ ಒಂದು ಅತ್ಯುತ್ತಮ ಶಾಲೆಯಾಗಿ ಬೆಳೆದು ನಿಂತಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಲಯನ್ಸ್ ಕ್ಲಬಿನ ಅಧ್ಯಕ್ಷ ವೀರೇಶ ಯರಗೇರಿ ಅಧ್ಯಕ್ಷತೆ ವಹಿಸಿದರು. ನರ್ಸರಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಮಕ್ಕಳ ನೃತ್ಯ ಹಾಗೂ ನೀತಿ ಭೋಧನೆಯ ರೂಪಕಗಳ ಪ್ರದರ್ಶನ ಜನಮನ ಸೆಳೆದವು. ರಾಷ್ಟç, ರಾಜ್ಯ, ತಾಲೂಕು ಮಟ್ಟದ ಗಣಿತ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಲಯನ್ಸ್ ಕ್ಲಬಿನ ಕಾರ್ಯದರ್ಶಿ ರವಿ ಪೈ, ಖಜಾಂಚಿ ಇಮ್ತಿಯಾಜ್. ಎಂ. ಅತ್ತಾರ, ಲಿಯೋ ಕ್ಲಬಿನ ಅಧ್ಯಕ್ಷ ಗುಲಾಮಲಿ, ಶಾಲೆಯ ಪಾಲಕರ ಸಮಿತಿಯ ಅಧ್ಯಕ್ಷ ಬೆಂಜಮಿನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ಪತಿ ರಜಪೂತ, ನಗರ ಸಭಾ ಸದಸ್ಯರುಗಳಾದ ಸುಧಾ ಜಾಧವ, ಪ್ರೀತಿ ನಾಯರ್, ಲಯನ್ಸ್ ಸದಸ್ಯರಾದ ಎಸ್.ಜಿ ಕುಮಾರಮಠ, ಸೈಯ್ಯದ ಇಸ್ಮಾಯಿಲ್ ತಂಗಳ, ಡಾ. ನಾಸಿರಅಹ್ಮದ ಜಂಗೂಬಾಯಿ, ಚೇತನ್ ಕುಮಾರಮಠ, ವಿ.ಪಿ ಜೋಶಿ, ಪಿ.ಕೆ ಜೋಶಿ, ಲತಾ ಶೆಟ್ಟಿ, ಲತಾ ಪಾಟೀಲ, ಗೀತಾ ಅಶ್ವಿನಕುಮಾರ, ಸುಮಂಗಲಾ, ಮಹಿಮಾ ಖಾನಾಪೂರ, ಸವಿತಾ ಯರಗೇರಿ, ಡಾ. ಪರವೀಣ ಶೇಖ ಹಾಗೂ ಪಾಲಕರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಶಾಲೆಯ ಕಾರ್ಯದರ್ಶಿ ಯು.ಎಸ್.ಪಾಟೀಲ ಸ್ವಾಗತಿಸಿದರು. ಮುಖ್ಯೋಪಾಧ್ಯಾಯನಿ ಪಿಂಕಿ ಪಾತ್ರೊ ವರದಿ ವಾಚಿಸಿದರು. ಸಮಿರಾ ಬಾಸೂರಿ, ಆಫ್ರಿನ್ ತಹಸೀಲ್ದಾರ ನಿರೂಪಿಸಿದರು. ಶಿಕ್ಷಕಿ ಪವಿತ್ರಾ ಮಡಿವಾಳ ವಂದಿಸಿದರು.