ಭಟ್ಕಳದ ಹಿಂದೂ ಮುಖಂಡರನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗೂಂಡಾ ಎಂದು ಸಂಬೋಧಿಸಿದ್ದಲ್ಲದೇ, ಅಶಾಂತಿ ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡುವುದರ ಜೊತೆಗೆ ಸುಳ್ಳು ದೂರು ನೀಡಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ, ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಡಿವೈಎಸ್ಪಿಗೆ ಮನವಿ ಸಲ್ಲಿಸಲಾಯ್ತು…
ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿ ನಗರ ಹೆಸರಿನ ನಾಮಫಲಕ ನವೀಕರಣಗೊಳಿಸುವ ವಿಚಾರದಲ್ಲಿ, ಎಸ್‌ಡಿಪಿಐ ಕಾರ್ಯಕರ್ತರು ತಪ್ಪು ಮಾಹಿತಿ ರವಾನಿಸಿದ್ದಾರೆ. ನಮಗೆ ಯಾವುದೇ ರೀತಿಯ ಭಗವಾ ಧ್ವಜ ಹಾರಿಸುವ ಅಥವಾ ಕೋಮು ಅಶಾಂತಿಯನ್ನು ಸೃಷ್ಟಿಸುವ ವಿಚಾರಗಳು ಇರದಿದ್ರೂ, ಎಸ್.ಡಿ.ಪಿ.ಐ. ಕಾರ್ಯಕರ್ತರಾದ ರಝಾಕ್ ಹುಸೇನ್ ಬ್ಯಾರಿ ಹಾಗೂ ಸೋಪಾ ಶಮಿ ನಾಮಫಲಕದ ಹತ್ತಿರದಲ್ಲಿರುವ ಮಸೀದಿಯ ಮೇಲೆ ಹಾಗೂ ಮಸೀದಿಯ ಮುಂಭಾಗದಲ್ಲಿ ಹಿಂದೂಗಳು ಭಗವಾ ಧ್ವಜ ಹಾಕುತ್ತಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಮೆಸೆಜ್‌ಗಳನ್ನು ಹರಿಬಿಟ್ಟು ಪ್ರಚೋದನಾಕಾರಿ ಹಾಗೂ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.. ಪೋಲೀಸರು ಸಹ ಈ ಸುಳ್ಳು ಮಾಹಿತಿ ನಂಬಿ ಬಂದೋಬಸ್ತ್ ಮಾಡುವಂತೆ ಮಾಡಿರುತ್ತಾರೆ. ಪ್ರಚೋಧನಾಕಾರಿ ಸುಳ್ಳು ಆಡಿಯೋ ಹರಿಬಿತ್ತಿದ್ದಲ್ಲದೆ ಎಸ್.ಡಿ.ಪಿ.ಐ. ಕಾರ್ಯಕರ್ತ ಮುಕ್ತಾರ್ ಮೋಹಮ್ಮದ್ ಕುಟ್ಟಿಕೋಡಿ ಎನ್ನುವವನು ವಿಡಿಯೊ ಕರೆ ಮೂಲಕ ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಿದ್ದು ಇದರ ವಿರುದ್ಧ ಶಹರ ಠಾಣೆಯಲ್ಲಿ ಜಾಲಿ ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ನಾಯ್ಕ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ…
ಇನ್ನು ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೂಂಡಾ ಎಂದು ಸಂಬೊಂಧಿಸಿ ದೂರು ನೀಡಿರುವ ಎಸ್.ಡಿ.ಪಿ.ಐನ ಪದಾಧಿಕಾರಿಗಳಾದ ತೌಫೀಕ್ ಬ್ಯಾರಿ, ವಾಸೀಮ್ ಮನೆಗಾರ್, ಮಕ್ಖುಲ್ ಶೇಖ್, ಅಬ್ದುಲ್ ಶಮಿ ಹಾಗೂ ಕಾರ್ಯಕರ್ತರಾದ ದೇವಿನಗರದ ರಝಾಕ್ ಹುಸೇನ್ ಬ್ಯಾರಿ, ಸೋಪಾ ಶಮಿ, ಮೊಹಮ್ಮದ್ ಕೈಫ್, ಮುಸ್ತಾನ್, ನಾಸಿರ್ ಹಮೀದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಎಸ್.ಡಿ.ಪಿ.ಐ ಅಣತಿ ಮೇರೆಗೆ ಅಶಾಂತಿ ಸೃಷ್ಟಿಸಲು ಪ್ರಚೋಧನಾಕಾರಿ ಆಡಿಯೋ ಮೆಸೆಜ್‌ಗಳನ್ನು ಹರಿಬಿಟ್ಟ ಎಸ್.ಡಿ.ಪಿ.ಐನ ಕಾರ್ಯಕರ್ತರ ವಿರುದ್ಧ ಸಹ ಕಾನೂನು ಕ್ರಮ ಜರುಗಿಸುವಂತೆ ಡಿವೈಎಸ್ಪಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ…
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಕೃಷ್ಣ ನಾಯ್ಕ ಆಸಕರಕೇರಿ, ಶ್ರೀನಿವಾಸ ಹನುಮನಗರ, ಶ್ರೀಕಾಂತ ನಾಯ್ಕ, ಮೋಹನ ನಾಯ್ಕ, ದಯಾನಂದ ನಾಯ್ಕ, ಶ್ರೀನಿವಾಸ ನಾಯ್ಕ ಹಾಗೂ ಮೊದಲಾದವರು ಉಪಸ್ಥಿತರಿದ್ದರು…
ಉದಯ ನಾಯ್ಕ, ನುಡಿಸಿರಿ ನ್ಯೂಸ್, ಭಟ್ಕಳ