ಅಂಕೋಲಾದ ಅವರ್ಸಾದಲ್ಲಿ ಕಟ್ಟಿಗೆ ತರಲು ಹೋದ ಮಹಿಳೆ ನಾಪತ್ತೆ..!

ಅಂಕೋಲಾ: ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆ ಓರ್ವರು ಮನೆಗೆ ಮರಳದೇ ನಾಪತ್ತೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇಲ್ಲಿನ ಅವರ್ಸಾ ಹಟ್ಟಿಕೇರಿಯ ನಿವಾಸಿ ಗುಬ್ಬಿ ಗಂಡ ಶೇಷು ಗೌಡ (75) ನಾಪತ್ತೆಯಾದವರು. ಅವರ ಮಗ ನಾಗಪ್ಪ ಶೇಷು ಗೌಡ ತಾಯಿಯನ್ನು ಪತ್ತೆ ಮಾಡಿಕೊಡುವಂತೆ ದೂರು ನೀಡಿದ್ದಾರೆ. 30-01-2024 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಅರೆಗದ್ದಾದಲ್ಲಿನ ತನ್ನ ಮನೆಯಿಂದ ಕಾಡಿಗೆ ಕಟ್ಟಿಗೆ ತರಲು ಹೋಗುವದಾಗಿ ಹೋಗಿದ್ದ ಗುಬ್ಬಿ ಗೌಡ ಈವರೆಗೆ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಅವರು 4 ಅಡಿ 10 ಅಂಗುಲ ಎತ್ತರ ಹೊಂದಿದ್ದಾರೆ. ಮನೆಯಿಂದ ತೆರಳುವಾಗ ಹಸಿರು ಮತ್ತು ಹಳದಿ ಬಣ್ಣದ ಬಟ್ಟೆ ಧರಿಸಿದ್ದು ಕತ್ತಿನಲ್ಲಿ ಮಣಿ ಸರವಿದ್ದು ಎಲ್ಲಿಯಾದರೂ ಪತ್ತೆಯಾದಲ್ಲಿ ಅಂಕೋಲಾ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ..