ಕೇಂದ್ರ ಸರ್ಕಾರ ನೀಡಿರುವ ಬಜೆಟ್‌ ಎಲ್ಲರನ್ನು ಒಳಗೊಂಡ ನಾವೀನ್ಯತೆಯುಳ್ಳ ಬಜೆಟ್‌ – ನಾಗೇಶ ಕುರುಡೇಕರ್


ಕಾರವಾರ :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈ ಮಧ್ಯಂತರ ಬಜೆಟ್‌ನಲ್ಲೂ ಎಲ್ಲ ಕ್ಷೇತ್ರಗಳ ಏಳಿಗೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕಾರವಾರ ಬಿಜೆಪಿ ನಗರ ಅಧ್ಯಕ್ಷ ನಾಗೇಶ್‌ ಕುರುಡೇಕರ್‌ ಸಂತಸ ವ್ಯಕ್ತಪಡಿಸಿದ್ದಾರೆ…

ಈ ಬಜೆಟ್‌ನಲ್ಲಿ ನಿರಂತರತೆಯ ವಿಶ್ವಾಸವಿದೆ. ವಿಕಸಿತ ಭಾರತದ ಆಧಾರ ಸ್ತಂಭಗಳಾಗಿರುವ ಯುವಕರು, ಬಡವರು, ಮಹಿಳೆಯರು ಮತ್ತು ರೈತರಿಗೆ ಈ ಬಜೆಟ್‌ ಶಕ್ತಿ ತುಂಬಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ‌ ಮಧ್ಯಂತರ ಮುಂಗಡ ಪತ್ರದ ಮೂಲಕ ಕೃಷಿ, ರಕ್ಷಣೆ, ನಾರಿಶಕ್ತಿ, ರೈಲ್ವೆ, ಆರ್ಥಿಕತೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ದೇಶವನ್ನು ವಿಕಸಿತಗೊಳಿಸುವ ಸಂಕಲ್ಪದೊಂದಿಗೆ ಯೋಜನೆ ರೂಪಿಸಿದೆ ಎಂದು ಹೇಳಿದ್ರು.

ಈ ಬಜೆಟ್ ನಾವಿನ್ಯತೆಯುಳ್ಳ ಬಜೆಟ್ ಆಗಿದೆ. ಇದು ದೇಶದ ಭವಿಷ್ಯದ ನಿರ್ಮಾಣದ ಬಜೆಟ್ ಆಗಿದೆ. ಈ ಬಜೆಟನಲ್ಲಿ ವಿಕಸಿತ ಭಾರತ ಗಟ್ಟಿಗೊಳಿಸುವ ಮೂಲಕ ಗ್ಯಾರಂಟಿ ಬಜೆಟ್ ಆಗಿದ್ದು. ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಹಾಗೂ ಹಣಕಾಸು ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ…