ಶಿರಸಿ: ಆಯುರ್ವೇದ ಕ್ಷೇತ್ರದಲ್ಲಿ ಓದುವವರು ಹೆಚ್ಚಬೇಕು. ಸಿಲೇಬಸ್ ಜ್ಞಾನಕ್ಕೆ ಸೀಮಿತ ಆದರೆ ಎತ್ತರದ ಸ್ಥಾನಕ್ಕೆ ನಾವೂ ಹೋಗಲು ಸಾಧ್ಯವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು. ರವಿವಾರ ನಗರದ ವಿನಾಯಕ ಸಭಾಂಗಣದಲ್ಲಿ ನಾಡಿನ ಹೆಸರಾಂತ ವೈದ್ಯ ಡಾ. ಗಿರಿಧರ ಕಜೆ ಅವರ ಆಯುರ್ವೇದ ಜ್ಞಾನದ ಭಾಗವಾಗಿ ಔನ್ನತ್ಯ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆಯುರ್ವೇದ ಶಕ್ತಿ ಜನ ಸಾಮಾನ್ಯರ ಭಾವನೆಯಲ್ಲಿ ಇದೆ. ಅದಕ್ಕೆ ಆಯುರ್ವೇದ ಕ್ಷೇತ್ರದಲ್ಲಿ ಹಲವಡೆ ಹಣತೆಯಾಗಿ ಕೆಲಸ ನಡೆಯುತ್ತಿದೆ. ಡಾ. ಗಿರಿಧರ ಕಜೆ ಅವರು ಇದಕ್ಕೆ ಒಂದು ಹೊಸ ಶಕ್ತಿ ನೀಡಿದ್ದಾರೆ ಎಂದ ಅವರು, ಕಜೆ ಅವರು ಆಯುರ್ವೇದ ಜ್ಞಾನ ಯಾನದ ಅಭಿಯಾನವ ಭಾಗವಾಗಿ ಬಿಡುಗಡೆ ಆಗಲಿರುವ 16 ಪುಸ್ತಕಗಳ ಸಂಗತಿಗಳೂ ಜನರಿಗೆ ತಲುಪಲಿ ಎಂದರು.
ಕೃತಿ ಕುರಿತು ಮಾತನಾಡಿದ ವಿದ್ಯಾ ವಾಚಸ್ಪತಿ ವಿ. ಉಮಾಕಾಂತ ಭಟ್ಟ ಮಾತನಾಡಿ, ಕಜೆ ಅವರು ಜನರ ಪರ ನಿಂತು ಆಯುರ್ವೇದದ ಮೂಲಕ ಜಾಗೃತಿ ಮೂಡಿಸಿದರು ಎಂದು ಬಣ್ಣಿಸಿದರು.
ಕೃತಿಕಾರ ಡಾ. ಗಿರಿಧರ ಕಜೆ ಮಾತನಾಡಿ, ಹೆಲ್ತ ಫಾರ್ ಆಲ್ ಡಿಸಿಸಿ ಫಾರ್ ಆಲ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ಎಡವಿದ್ದು ಎಲ್ಲಿ.? ಔಷಧ ತಲುಪಿಸಿ ಆರೋಗ್ಯ ಸಾಧನೆ ಮಾಡಲು ಸಾಧ್ಯವಿಲ್ಲ. ಆಯುರ್ವೇದ ಜ್ಞಾನ ತಲುಪಿಸಿ ಸಾಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮೋಹನ ಭಾಸ್ಕರ ಹೆಗಡೆ, ಗಾಯತ್ರೀ ರಾಘವೇಂದ್ರ ಮುಂತಾದವರಿದ್ದರು.