ಅಯೋಧ್ಯೆಯ ಶ್ರೀರಾಮ‌ ಮಂದಿರದ ಲೋಕಾರ್ಪಣೆಯ ನಿಮಿತ್ತ ಕ್ಯಾಸಲ್ ರಾಕ್’ನಲ್ಲಿ ವಿಶೇಷ ಪೂಜೆ, ಭಜನಾ ಸಂಕೀರ್ತನೆ

ಜೋಯಿಡಾ : ಜ: 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯ ನಿಮಿತ್ತವಾಗಿ ತಾಲೂಕಿನ ಕ್ಯಾಸಲ್ ರಾಕ್ ನಲ್ಲಿ ಕಳೆದ ಐದು ದಿನಗಳಿಂದ ಭಜನಾ ಸಂಕೀರ್ತನೆ, ನಗರ ಭಜನೆ ಹಾಗೂ ಶ್ರೀ.ಹನುಮಾನ ಮಂದಿರದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪೂಜೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮ ಬಾಂಧವರು ಭಾಗವಹಿಸಿದ್ದರು.

ಶನಿವಾರವೂ ಸಂಜೆಯವರೆಗೆ ನಗರ ಭಜನಾ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ಸಂತೋಷ್ ರೇಡ್ಕರ್ ಅವರು ಶ್ರೀರಾಮ‌ ಮಂದಿರ ನಿರ್ಮಾಣ ಹಿಂದೂ ಧರ್ಮ‌ ಬಾಂಧವರ ಅನೇಕ‌ ವರ್ಷಗಳ ಬಹುದೊಡ್ಡ ಕನಸು. ಇದೀಗ ಆ ಕನಸು ನನಸಾದ ಸುವರ್ಣ ಘಳಿಗೆಯಲ್ಲಿದ್ದೇವೆ. ಅಯೋಧ್ಯೆಯಲ್ಲಿ ಜ: 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯ ನಿಮಿತ್ತ ಕ್ಯಾಸಲ್ ರಾಕ್ ವ್ಯಾಪ್ತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಧಾರ್ಮಿಕ‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜ: 22 ರಂದು ವಿಶೇಷ ಪೂಜಾ ಕಾರ್ಯಕ್ರಮ, ಸಾಮೂಹಿಕ ಭಜನಾ‌ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಶ್ರೀರಾಮ‌ ಮಂದಿರ ಲೋಕಾರ್ಪಣೆಯಾಗುತ್ತಿರುವುದು ನಮ್ಮೆಲ್ಲರ ಜೀವನದ‌ ಮಹೋನ್ನತ ಸೌಭಾಗ್ಯ ಎಂದರು.

.