ಸಿದ್ದಾಪುರ : ಪಟ್ಟಣದ ಭಾಲಭವನದಲ್ಲಿ ಪ್ರಗತಿಮಿತ್ರ ಸಂಸ್ಥೆಯಿಂದ ಆಯ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಗತಿಮಿತ್ರ ಸಂಸ್ಥೆಯ ನಿರ್ದೇಶಕ ಹರಿಶ್ಚಂದ್ರ ಭಟ್ಟರವರು ಮಾತನಾಡಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದವರನ್ನು ಗುರುತಿಸಿ ಅವರಿಗೆ ಶಿಷ್ಯವೇತನವನ್ನು ನೀಡುತ್ತಿರುವ ಉದ್ದೇಶವೇನೆಂದರೆ ವಿದ್ಯಾರ್ಥಿಗಳ ಕಲಿಕಾ ಆಸಕ್ತಿಗೆ ಸಹಾಯವಾಗುತ್ತದೆ ಮತ್ತು ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚುತ್ತದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟರವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುಂದಿನ ತಮ್ಮ ಭವಿಷ್ಯವನ್ನು ರೂಪಿಸಲು ಈಗಲೇ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಮತ್ತು ಪ್ರಾಧಾನ್ಯ ನೀಡಬೇಕು ಆಗ ಮಾತ್ರ ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನವನ್ನು ಹೊಂದಲು ಸಾಧ್ಯ.
ಮಹಿಳಾ ಮತ್ತು ಮಕ್ಕಳ ಇಲಾಖೆ ಸಿ ಡಿ ಪಿ ಓ ಪೂರ್ಣಿಮಾ ಮಾತನಾಡಿ ಪ್ರಗತಿಮಿತ್ರ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಮುಂದಿನ ಪೀಳಿಗೆಗೆ ಕೂಡ ಸಹಾಯವನ್ನು ಮಾಡುತ್ತಿದೆ. ಇದೇ ರೀತಿ ಅವರ ಕಾರ್ಯಕ್ರಮಗಳು ಮುಂದೆ ನಡೆಯಲಿ ಎಂದು ಆಶೀಸಿದರು.
ಪ್ರಗತಿ ಮಿತ್ರ ಸಂಸ್ಥೆಯ
ಟ್ರಸ್ಟಿಯಾದ ಶುಭಾ ಪೈ ಅವರು ಮಾತನಾಡಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣವಿದ್ದು ಮತ್ತು ಕೌಶಲ್ಯಗಳಿದ್ದು ಆರ್ಥಿಕ ಸಹಾಯದ ಕೊರತೆ ಇರುತ್ತದೆ ಶಿಷ್ಯ ವೇತನ ನೀಡಿದಾಗ ಅವರು ಇನ್ನು ಹೆಚ್ಚು ಶಿಕ್ಷಣದ ಮೇಲೆ ಆಸಕ್ತಿಯನ್ನು ಹೊಂದಿರುತ್ತಾರೆ ಈ ವಿದ್ಯಾರ್ಥಿಗಳು ಇನ್ನು ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಗತಿ ಮಿತ್ರ ಸಂಸ್ಥೆಯ ಸಿಬ್ಬಂದಿ ವರ್ಗ ಪಾಲಕರು ಉಪಸ್ಥಿತರಿದ್ದರು.