ಸಮೃದ್ಧ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತಾದ ವಿಚಾರ ಸಂಕೀರ್ಣ

ಸಿದ್ದಾಪುರ : ಇಂದಿನ ಯುವ ಸಮಾಜ ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ಬೇಸರವೆನಿಸುತ್ತದೆ ಇದರಿಂದ ದೇಶದ ಅಭಿವೃದ್ಧಿಗೂ ಮಾರಕ ಮತ್ತು ಅವರ ಆರೋಗ್ಯಕ್ಕೂ ಕೂಡ ಮುಂದಿನ ದಿನಗಳಲ್ಲಿ ಅತಿಯಾದ ತೊಂದರೆಗಳಾಗುವುದರಿಂದ ನಾವೆಲ್ಲರೂ ವಿವಿಧ ಸಂಘಟನೆಗಳು ಒಳಗೊಂಡು ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕಿದೆ ಈ ಮೂಲಕ ದೇಶಕ್ಕೆ ನಾವು ಬಲಿಷ್ಠ ಯುವ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲರ ಪಾತ್ರ ಮಹತ್ವದ್ದಿದೆ ಎಂದು ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರ್ಕರ್ ಹೇಳಿದರು.
ಅವರು ಪಟ್ಟಣದ ಹೊಸೂರಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಈಶ್ವರಿ ವಿಶ್ವವಿದ್ಯಾನಿಲಯದವರು ಏರ್ಪಡಿಸಿದ ಸಮೃದ್ಧ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಕುರಿತಾದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದುಡಿದು ತಂದೆ-ತಾಯಿಗಳನ್ನು ಸಾಕಬೇಕಾದ ಮಕ್ಕಳು ಸಣ್ಣ ತಪ್ಪಿನಿಂದಾಗಿ ಕೈತಪ್ಪಿ ಹೋದರೆ ಅವರನ್ನ ಪುನಃ ಮಾರ್ಗಕ್ಕೆ ತರುವುದು ಬಹಳಷ್ಟು ಕಷ್ಟ, ನಾವು ನಮ್ಮ ಸುತ್ತಮುತ್ತಲಿನಗೂ ಹಾಗೂ ಸಂಬಂಧಿಕರುಗಳಲ್ಲಿ ಈ ರೀತಿಯ ದುಶ್ಚಟಗಳಿಗೆ ಯಾರಾದರೂ ಬಲಿಯಾಗುತ್ತಿದ್ದರೆ ಅವರನ್ನು ಕರೆದು ಮನಮುಟ್ಟುವ ರೀತಿಯಲ್ಲಿ ಅವರಿಗೆ ಜಾಗೃತಿಯನ್ನು ಮೂಡಿಸಬೇಕು ಆ ಮೂಲಕ ಸಮೃದ್ಧ ಭಾರತ ನಿರ್ಮಾಣ ಮಾಡುವಲ್ಲಿ ಸಮರ್ಥ ಯುವಕರನ್ನು ಸಿದ್ಧಪಡಿಸಬೇಕಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಕೆ ವೀಣಾಜಿ ದಿಕ್ಸೂಚಿ ಭಾಷಣವನ್ನು ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದಿಸುವ ಉದ್ದೇಶ ಹಾಗೂ ಐಷಾರಾಮಿ ಜೀವನ ಮಾಡುವ ಮನೋಭಾವನೆಯಿಂದ ಇಂದು ಯುವಕರು ಅಡ್ಡ ದಾರಿಯನ್ನ ಹಿಡಿಯುತ್ತಿದ್ದಾರೆ, ಮನಸ್ಸಿನ ನಿರ್ಧಾರದ ಮುಂದೆ ಯಾವುದು ಇಲ್ಲ, ಯಾಕಂದರೆ ನಾವು ದೃಢವಾಗಿ ನಿರ್ಧಾರ ಮಾಡಿದರೆ ಗುರಿ ತಲುಪಬಹುದು ಮತ್ತು ಇಂತಹ ವ್ಯಸನಗಳಿಂದ ದೂರ ಬರಲು ಸಾಧ್ಯ, ಮನಸ್ಸನ್ನು ಗಟ್ಟಿಗೊಳಿಸುವಂತಹ ಮಾರ್ಗವನ್ನು ತಿಳಿಸಬೇಕು ಮತ್ತು ಏನೇ ಬಂದರೂ ಎದುರಿಸಿ ನಿಲ್ಲುವಂತಹ ಧೈರ್ಯವನ್ನು ಯುವಕರನ್ನು ತುಂಬಬೇಕು ಎಂದರು.
ತಾಲೂಕಿನ ವಿವಿಧಡೆಯಿಂದ ಆಗಮಿಸಿದ ಯುವಕ ಹಾಗೂ ಕ್ರೀಡಾ, ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ತಮ್ಮ ತಮ್ಮ ಅಭಿಪ್ರಾಯ ಅನಿಸಿಕೆಯನ್ನು ಹಂಚಿಕೊಂಡರು. ಆರ್ ಎಸ್ ಎಸ್ ಸಂಚಾಲಕ ಸೋಮಶೇಖರ್ ಗೌಡರ್ ಸ್ವಾಗತಿಸಿದರು,ಶಿಕ್ಷಕ
ಜಿ ಟಿ ಭಟ್ ವಂದಿಸಿದರು, ಬಿ. ಕೆ. ದೇವಿಕಾ ನಿರೂಪಿಸಿದರು.