ಯಲ್ಲಾಪುರದಲ್ಲಿ ಪ್ಲಾಸ್ಟಿಕ್‌ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ


ಯಲ್ಲಾಪುರ :ತಾಲೂಕಿನ ಹುಣಶೆಟ್ಟಿಕೊಪ್ಪದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇಲ್ಲಿನ ಆಶಿಯಾ ಸಮಾಜ ಸೇವಾ ಸಂಸ್ಥೆ ವತಿಯಿಂದ ಹ್ಯಾಂಡ್ ವಾಷ್ ಬಗ್ಗೆ ಜಾಗೃತಿ ಮತ್ತು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಶನಿವಾರ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಸಂಸ್ಥೆಯ ಸದಸ್ಯೆ ಪರ್ಜಾನಾ ಶೇಖ್ ಮಾತನಾಡಿ, ಕೈ ಶುಚಿಯಾಗಿ ಇಲ್ಲದಿದ್ದರೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಮುಶ್ರತ್ ಮತ್ತು ಆಯುಷಾ ಸಂಗಡಿಗರು ಸರಿಯಾಗಿ ಕೈ ತೊಳೆಯುವುದನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿದರು. ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.
ಸಂಸ್ಥೆಯ ಸಂಸ್ಥಾಪಕ ವಿಜಯ್ ನಾಯ್ಕ್ ಮತ್ತು ಅಧ್ಯಕ್ಷ ಅನಿಲ್ ಮರಾಠೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಗಂಗಾಧರ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷೆ ಆಯುಷಾ ಗುಜನೂರ, ಮುಖ್ಯೋಪಾಧ್ಯಾಯ ಬಿ ಎಂ ನಾಯ್ಕ್ ಉಪಸ್ಥಿತರಿದ್ದರು. ನಿರ್ದೇಶಕಿ ಸಂಧ್ಯಾ ಕಳಸುರ್ಕರ್ ನಿರ್ವಹಿಸಿದರು.‌