ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ತನಿಖೆ) ಆಗಿ ಅಧಿಕಾರ ವಹಿಸಿಕೊಂಡ ನವೀನ ಪಿ ಬೋರಕರ

ಸಿದ್ದಾಪುರ : ಕಾರವಾರ ತಾಲ್ಲೂಕಿನ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ತನಿಖೆ) ಆಗಿ ಅಧಿಕಾರ ವಹಿಸಿಕೊಂಡ ಪಟ್ಟಣ ವ್ಯಾಪ್ತಿಯ ಹಾಳದಕಟ್ಟಾದ ನವೀನ ಪಿ ಬೋರಕರ. ಪಟ್ಟಣ ಪಂಚಾಯತ್ ಸದಸ್ಯ, ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರಕರ್ ರವರ ಸಹೋದರರಾದ ಇವರು ಭಟ್ಕಳ ಪೊಲೀಸ್ ಠಾಣೆಯಿಂದ ಪದೋನ್ನತಿ ಪಡೆದು ಇತೀಚೆಗೆ ಪಿ ಎಸ್ ಐ ಆಗಿ ಅಧಿಕಾರ ವಹಿಸಿಕೊಂಡರು. ಬಾಲ್ಯದಲ್ಲಿ ಕಡುಬಡತನ ಕಂಡ ಇವರು ಓದಿ ಏನಾದರು ಸಾಧಿಸಬೇಕು ಎನ್ನುವ ಛಲದಿಂದ ಹಠ ಬಿಡದೆ ಬಂದ ಕಷ್ಟಗಳನ್ನೆಲ್ಲ ಸವಾಲನ್ನಾಗಿ ಎಲ್ಲೂ ಎದೆ ಗುಂದದೆ ಇಟ್ಟ ಹೆಜ್ಜೆ ಹಿಂದಿಡದೆ ಗುರಿಯತ್ತ ಸಾಗುತ್ತಾ ಅನೇಕ ಪ್ರಶಂಸೆಗೆ ಪಾತ್ರರಾಗಿ ಗುರಿ ತಲುಪಿ ಮಾದರಿಯಾಗಿದ್ದಾರೆ. 1996 ರಲ್ಲಿ ಪೊಲೀಸ್
ಕಾನ್ಸ್ ಟೇಬಲ್ ಹುದ್ದೆಗೆ ಭರ್ತಿಯಾಗಿ ಪೊಲೀಸ್ ಇಲಾಖೆಯಲ್ಲಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಹವಾಲ್ದಾರ್, ಎ ಎಸ್ ಐ ಆಗಿ ಕರ್ತವ್ಯದಲ್ಲಿ ಯಾವುದೇ ಚ್ಯುತಿ ಬರದೇ ಕಾರವಾರ, ಸಿದ್ದಾಪುರ, ಶಿರಸಿ ಗ್ರಾಮೀಣ, ಭಟ್ಕಳ ಗ್ರಾಮೀಣ ಹಾಗೂ ಭಟ್ಕಳ ಶಹರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಪದೋನ್ನತಿ ಹೊಂದಿ ಕಾರವಾರ ತಾಲ್ಲೂಕಿನ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ತನಿಖೆ) ಆಗಿ ಕರ್ತವ್ಯಕ್ಕೆ ಹಾಜರಾದ ನವೀನ ಪಿ ಬೋರಕರ ಸಿದ್ದಾಪುರ, ಇವರು ಸೊರಬ ತಾಲೂಕಿನ ಕುಗ್ರಾಮವಾದ ಹೊಳೆಮರೂರಿನಲ್ಲಿ ಜನಿಸಿ ಸಿದ್ದಾಪುರದಲ್ಲಿ ವಾಸ್ತವ್ಯ ಮಾಡಿ ಡಿಗ್ರಿ ವಿದ್ಯಾಭ್ಯಾಸ ಪಡೆದರು, ಈಗಾಗಲೇ ಇವರು ತಮಿಳುನಾಡು, ಕೇರಳ, ಮುಂಬೈ, ಗೋವಾ, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಹರಿಯಾಣ, ಅಸ್ಸಾಂ, ಹೀಗೆ ಹತ್ತು ಹಲವಾರು ರಾಜ್ಯಗಳಿಗೆ ತೆರಳಿ ವಿವಿಧ ಹಂತದ ಪ್ರಕರಣಗಳನ್ನು ಬೇಧಿಸುವಲ್ಲಿ ಹಾಗೂ ರಾಜ್ಯ, ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಕರ್ತವ್ಯವನ್ನು ಗುರುತಿಸಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದುಕೊಂಡಿದ್ದಾರೆ.
ಬಿಡುವಿನ ಸಮಯದಲ್ಲಿ ಕಲೆ, ಕ್ರೀಡೆ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿರುತ್ತಾರೆ. ನವೀನ ಪಿ ಬೋರಕರ ರವರನ್ನು ತಾಲೂಕಿನ ಡಾ ಅಂಬೇಡ್ಕರ ಶಕ್ತಿ ಸಂಘ, ನಿವೃತ್ತ ನೌಕರರ ಸಂಘ, ವರ್ತಕರ ಸಂಘ, ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ, ಪತಂಜಲಿ ಯೋಗ ಸಮಿತಿ, ಸಂಕಲ್ಪ ಸೇವಾ ಟ್ರಸ್ಟ್, ರೈತ ಸಂಘ,ಜಾಗ್ರತ ನಾಗರೀಕ ವೇದಿಕೆ, ನಾಡದೇವಿ ಹೋರಾಟ ವೇದಿಕೆ,ಉ. ಕ. ಜಿ. ಟಿ ನಾಯ್ಕ್ ಅಭಿಮಾನಿ ಬಳಗ, ಯು. ಕೆ. ಗ್ರೂಪ್ ಸಿದ್ದಾಪುರ ಲಯನ್ಸ್ ಕ್ಲಬ್ ಹಾಗೂ ಕಾಗೇರಿ ಅಭಿಮಾನಿ ಬಳಗ ಇನ್ನಿತರ ಸಂಘ ಸಂಸ್ಥೆಗಳು ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿ, ಇನ್ನು ಹೆಚ್ಚಿನ ಸ್ಥಾನ ಮಾನ ದೊರೆಯಲೆಂದು ಶುಭ ಕೋರಿದ್ದಾರೆ.