ಬೆಂಗಳೂರಿನ ಆನಂದ್‌ರಾವ್ ವೃತ್ತದ ಬಳಿಯಿರುವ ಕಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸಭಾಭವನದಲ್ಲಿ ಅ.14ರಂದು ಮುಂಜಾನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಭಯ ಭಾಷಾ ಸಾಹಿತಿ ವಾಸುದೇವ ಶಾನಭಾಗ್ ಅವರಿಂದ ಪಿಪಿಟಿ ಪ್ರದರ್ಶನದ ಜೊತೆ ಕರ್ನಾಟಕದರ್ಶನದ ಉಪನ್ಯಾಸ ನಡೆಯಲಿದೆ.
ಇದರ ಜೊತೆಗೆ ಬಾಮಿನಿ ಷಟ್ಪದಿಯಲ್ಲಿ ನೂರಕ್ಕೂ ಹೆಚ್ಚು ಆಧ್ಯಾತ್ಮಿಕ ಕೃತಿ ರಚಿಸಿದ ಬೆಸ್ಕಾಂನ ನಿವೃತ್ತ ಎಜಿಎಂ ಬಿವಿ ಸತ್ಯನಾರಾಯಣರಾವ್, ಹಾಗೂ ಭಾರತ ದೇಶದಲ್ಲೇ ಪ್ರಪ್ರಥಮವಾಗಿ ಶತಮಾನಗಳ ಕಾಲದ ಉತ್ತರ ಕನ್ನಡ ಜಿಲ್ಲೆಯ ಗ್ರಂಥಕಾರರ ಕೃತಿಕೋಶವನ್ನು ಸಂಪಾದಿಸಿದ ನಾರಾಯಣ ಶಾನಭಾಗ್ ವಾಲ್ಗಳ್ಳಿ ಇವರಿಗೆ ಸನ್ಮಾನ, ಬಹುಭಾಷಾ ಸಾಹಿತಿ ಶಾಮಂ ಕೃಷ್ಣರಾಯ ಅಧ್ಯಕ್ಷತೆಯಲ್ಲಿ ನಡೆಯಲಿದೆ…
ಈ ಸಂದರ್ಭದಲ್ಲಿ ಕುಮಾರಿ ನೇಹಾ ಹೆಗಡೆ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರಾದ ವಿಶ್ವೇಶ್ವರ ಗಾಯತ್ರಿ ತಿಳಿಸಿದ್ದಾರೆ.