ಗಟಾರದೊಳಗೆ ಬಿದ್ದು ಒದ್ದಾಡಿದ ಎಮ್ಮೆ : ಸ್ಥಳೀಯರ ಸಹಕಾರದಲ್ಲಿ‌ ನಗರ ಸಭೆಯ ಪೌರಕಾರ್ಮಿಕರಿಂದ ರಕ್ಷಣೆ

ದಾಂಡೇಲಿ : ನಗರದ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಕಾರ್ಯಾಲಯದ ಹತ್ತಿರದಲ್ಲಿರುವ ಗಟಾರದೊಳಗೆ ಎಮ್ಮೆಯೊಂದು ಬಿದ್ದು, ಮೇಲಕ್ಕೆ ಬರಲಾಗದೇ ಒದ್ದಾಡಿದ ಘಟನೆ ಮಂಗಳವಾರ ನಡೆದಿದೆ.

ಆಳವಾದ ಗಟಾರವಾಗಿರುವ ಹಿನ್ನಲೆಯಲ್ಲಿ ಎಮ್ಮೆಗೆ ಮೇಲೆ ಬರಲು ಅಸಾಧ್ಯವಾಗಿದೆ. ಸ್ಥಳಕ್ಕೆ ಬಂದ ನಗರ ಸಭೆಯ ಪೌರಕಾರ್ಮಿಕರು ಸ್ಥಳೀಯರ ಸಹಕಾರದಲ್ಲಿ ಎಮ್ಮೆಯನ್ನು ಮೇಲಕ್ಕೆತ್ತಿದ್ದಾರೆ.