ಅಂಕೋಲಾ: ಇಲ್ಲಿನ ಶೆಟಗೇರಿಯ ರೇಣುಕಾ ರಮಾನಂದರ ಸಂಬಾರಬಟ್ಟಲ ಕೊಡಿಸು ಕವನ ಸಂಕಲನಕ್ಕೆ ಬೆಂಗಳೂರಿನ ಶೂದ್ರ ಹಾಗೂ ನೆಲದಮಾತು ಪ್ರತಿಷ್ಠಾನದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೆಸರಿನ ಪ್ರಶಸ್ತಿ ಪ್ರಧಾನವು ಜೆ ಪಿ ನಗರದ ಮಾನಸ ವಿದ್ಯಾಕೇಂದ್ರದಲ್ಲಿ ರವಿವಾರದಂದು ಜರುಗಿತು
ಶೂದ್ರ ಪತ್ರಿಕೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶೂದ್ರ ಶ್ರೀನಿವಾಸರ ಬದುಕು ಬರಹ ಕೃತಿ ಬಿಡುಗಡೆ ಹಾಗೂ ಐದು ಪ್ರಮುಖ ಸಾಹಿತ್ಯ, ಸಂಸ್ಕ್ರತಿ ಮತ್ತು ಕೃಷಿ ಕುರಿತ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪ್ರಧಾನಮಾಡಲಾಯಿತು. ಸಾಹಿತ್ಯಕಾಗಿ ಇರುವ ರೇಣುಕಾ ರಮಾನಂದರಿಗೆ ದೊರೆತ ಈ ಪ್ರಶಸ್ತಿ ರೂ 12,000 ನಗದು, ಪ್ರಶಸ್ತಿ ಫಲಕ ಹಾಗೂ ಸಮ್ಮಾನವನ್ನು ಒಳಗೊಂಡಿದೆ.
ಪ್ರೊ. ಎಸ್ ಜಿ ಸಿದ್ಧರಾಮಯ್ಯ, ಸಂಯುಕ್ತ ಕರ್ನಾಟಕ ಸಂಪಾದಕರಾದ ಹುಣಸವಾಡಿ ರಾಜನ್, ಡಾ. ಕೆ ಮರುಳಸಿದ್ದಪ್ಪ, ಶೂದ್ರ ಶ್ರೀನಿವಾಸ, ಪ್ರತಿಷ್ಠಾನದ ಅಧ್ಯಕ್ಷರಾದ ಎಚ್ ದಂಡಪ್ಪ ಮುಂತಾದವರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ರೇಣುಕಾರ ಸಂಬಾರಬಟ್ಟಲ ಕೊಡಿಸು ಸಂಕಲನವು ಈಗಾಗಲೇ ವಿಭಾ ಸಾಹಿತ್ಯ ಪ್ರಶಸ್ತಿ, ಬಳ್ಳಾರಿಯ ಸಂಗಂ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿದ್ದು ಇದರ ಕೃತಿಕಾರರಾದ ರೇಣುಕಾ ರಮಾನಂದರು ಅಂಕೋಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
..