ರೈಲಿನಲ್ಲಿ ಯುವತಿಗೆ ಕಿರುಕುಳ: ದೂರು ದಾಖಲು

ಅಂಕೋಲಾ: ರೈಲಿನಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನೆರೆ ರಾಜ್ಯದ ವ್ಯಕ್ತಿಯ ಮೇಲೆ ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿದೆ.


ದಕ್ಷಿಣ ಭಾರತದ ರಾಜ್ಯವೊಂದರ ಯುವತಿ ಮಂಗಳವಾರ ಪೂನಾ ಎಕ್ಸ್ಪ್ರೆಸ್ ರೈಲು ಸಂಖ್ಯೆ 11098ರಲ್ಲಿ ಪ್ರಯಾಣಿಸುತ್ತಿದ್ದರು. ಮುಂಜಾನೆ 7.30ಕ್ಕೆ ರೈಲು ಅಂಕೋಲಾ ಸಮೀಪದ ಮಾದನಗೇರಿ ರೈಲು ನಿಲ್ದಾಣಕ್ಕೆ ತಲುಪಿದಾಗ ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ. ಈ ಅವಧಿಯಲ್ಲಿ ಯುವತಿ ಮಲಗಿದ್ದು, ಆರೋಪಿ ಹಾಲಿ ಮಹಾರಾಷ್ಟ್ರ ಸಾಂಗ್ಲಿಯಲ್ಲಿನ ಮೂಲತ ಕೇರಳ ರಾಜ್ಯದ ಕಣ್ಣೂರು ಮೂಲದ ಸುಬರಾವ್ ದತ್ತಾತ್ರೇಯ ಚವಾಣ್ (47) ಯುವತಿಗೆ ಅಮಾನುಷ ರೀತಿಯಲ್ಲಿ ಲೈಗಿಂಕ ಕಿರುಕುಳ ನೀಡಿದ್ದಾನೆ. ಯುವತಿಯ ಮುಖದ ಹತ್ತಿರ ಹಸ್ತಮೈಥುನ ನಡೆಸಿ ನೀಚ ಕೃತ್ಯ ಎಸಗಿ ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಿ.ಎಸ್ ಐ ಉದ್ದಪ್ಪ ಧರೆಪ್ಪನವರ್ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.