ಅಂಕೋಲಾ : ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಶನಿವಾರ ನದಿಭಾಗ ಕಡಲ ತೀರದಲ್ಲಿ ಹರಡಿದ್ದ ಪ್ಲಾಸ್ಟಿಕ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಚಗೊಳಿಸಿದರು.
ಹೊಸಗದ್ದೆ ಬೋಳೆಗ್ರಾಮದಲ್ಲಿ ಏರ್ಪಡಿಸಲಾಗಿರುವ ವಿಶೇಷ ವಾರ್ಷಿಕ ಶಿಬಿರದ ನಿಮಿತ್ತವಾಗಿ ಸುಮಾರು 50 ಶಿಬಿರಾರ್ಥಿಗಳು ಎನ್.ಎಸ್.ಎಸ್.ಅಧಿಕಾರಿಗಳಾದ ಅರ್.ಪಿ.ಭಟ್ ಮತ್ತು ಜಿ.ಸಿ.ಕಾಲೇಜು ಗರ್ವನಿಂಗ ಕೌನ್ಸಿಲ್ ಕಾರ್ಯಾದ್ಯಕ್ಷ ಡಾ. ದೇವಾನಂದ ಗಾಂವಕರ ಮಾರ್ಗದರ್ಶನದಲ್ಲಿ, ಕಡಲ ತೀರದುದ್ದಕ್ಕೂ ಹರಡಿದ್ದ ಸುಮಾರು 40 ಚೀಲಗಳಷ್ಟು ಪ್ಲಾಸ್ಟಿಕ ತ್ಯಾಜ್ಯವನ್ನು ಸಂಗ್ರಹಿಸಿ ಬೊಬ್ರವಾಡ ಗ್ರಾಮ ಪಂಚಾಯತಿಯ ವಾಹನದ ಮೂಲಕ ವಿಲೇವಾರಿ ಮಾಡಿದರು.
ವಿದ್ಯಾರ್ಥಿಗಳಿಗೆ ದೇವಾನಂದ ಗಾಂವಕರ ಅವರು ಉಪಹಾರ ಮತ್ತು ಕ್ಯಾಪ್ ನೀಡಿ ಪ್ರೊತ್ಸಾಹಿಸಿದರು. ಗ್ರಾಮ ಪಂಚಾಯತ ಸದಸ್ಯ ಮಂಜುನಾಥ ನಾಯ್ಕ ಕುಡಿಯುವ ನೀರು ಪೂರೈಸಿದರು. ವಿದ್ಯಾರ್ಥಿಗಳ ಶ್ರಮದಾನ ಮತ್ತು ಪರಿಸರ ಕಾಳಜಿಯನ್ನು ಸ್ಥಳಿಯರು ಶ್ಲಾಘಿಸಿದ್ದಾರೆ. ಸಹ ಶಿಬಿರಾದಿಕಾರಿಗಳಾದ ಡಾ. ಪ್ರವೀಣ ನಾಯ್ಕ, ವೇದಾ ಭಟ್, ಹರಿಪ್ರಸಾದ ದೇಸಾಯಿ, ಪ್ರದೀಪ ಗೌಡ, ವೈಭವ ಶೆಟ್ಟಿ ಉಪಸ್ಥಿತರಿದ್ದರು.