ಅಂಕೋಲಾ: ತೆಲಂಗಾಣದ ವಾರಂಗಲನಲ್ಲಿ ನಡೆದ 34ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯಶಸ್ ಪ್ರವೀಣ್ ಕುರುಬರ 18 ವರ್ಷದ ಒಳಗಿನ ಬಾಲಕರ ಹ್ಯಾಮರ್ ಥ್ರೋ ನಲ್ಲಿ 65.54 ಮೀಟರ್ ಎಸೆದು ನೂತನ ಕೂಟ ದಾಖಲೆಯನ್ನ ನಿರ್ಮಿಸಿದ್ದಾನೆ.
ಮುಂಡಗೋಡದ ಕೆವಿನ ಸಿದ್ದಿ 14 ವರ್ಷದೊಳಗಿನ ಬಾಲಕರ 60 ಮೀಟರ್ ಸ್ಪರ್ಧೆಯಲ್ಲಿ 7.38 ಸೆಕೆಂಡ್ ನಲ್ಲಿ ಓಡಿ ನೂತನ ದಾಖಲೆಯನ್ನ ನಿರ್ಮಿಸಿ ನಮ್ಮ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾನೆ ಎಂದು ಡಿಸ್ಟ್ರಿಕ್ ಅಥ್ಲೆಟಿಕ್ಸ್ ಅಸೋಸಿಯೇಷನ್, ಉತ್ತರ ಕನ್ನಡದ ಕಾರ್ಯದರ್ಶಿ ಕೆ. ಆರ್. ನಾಯಕ ಬೇಲೆಕೇರಿ ಹಾಗೂ ಅಧ್ಯಕ್ಷರಾದ ಸದಾನಂದ ನಾಯಕ ಸಂಸ್ಥೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರ ಸಾಧನೆಗೆ ಜಿಲ್ಲೆಯ ಕ್ರೀಡಾಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿತ್ತಾರೆ.