ಹೊನ್ನಾವರದ ಗೋಲ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಯಶಸ್ವಿ ವಾರ್ಷಿಕ ಕ್ರೀಡಾಕೂಟ

ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡಾ ದಿನವನ್ನು ಉದ್ಘಾಟಿಸಿದರು‌. ವಿದ್ಯಾರ್ಥಿಗಳ ನಡುವಿನ ಶಿಸ್ತು ಮತ್ತು ಸಮಾನತೆಯನ್ನು ಪ್ರದರ್ಶಿಸುವುದಕ್ಕಾಗಿ ಪ್ರಾರಂಭದಲ್ಲಿ ಅದ್ಭುತವಾದ ಮಾರ್ಚ್ ಪಾಸ್ಟ್, ಪಾಂಪ್ ಪಾಂಪ್ ಡ್ರಿಲ್, ಮಾಸ್ ಪಿಟಿ, ಯೋಗ, ಏರೋಬಿಕ್ಸ್ ಮತ್ತು ಪಿರಾಮಿಡ್ ಸೇರಿದಂತೆ ವಿವಿಧ ಆಕರ್ಷಕ ಡ್ರಿಲ್ ಗಳು ನೆರೆದಂತಹ ಪ್ರೇಕ್ಷಕರನ್ನು ಹಾಗೂ ವೇದಿಕೆಯಲ್ಲಿದ್ದ ಗಣ್ಯರನ್ನು ಆಕರ್ಷಿಸಿದವು ಮತ್ತು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹಾಗೂ ತಂಡದ ಕೆಲಸವನ್ನು ಎತ್ತಿ ತೋರಿಸಿದವು. ಓಟದ ಸ್ಪರ್ಧೆ, ಥ್ರೋ ಬಾಲ್, ಬಾಸ್ಕೆಟ್ ಬಾಲ್, ರೀಲೆ ಮತ್ತು ಅಥ್ಲೆಟಿಕ್ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಈ ಎಲ್ಲಾ ಸ್ಪರ್ಧೆಗಳಲ್ಲಿ ಅಸಾಧಾರಣ ಕೌಶಲ್ಯ, ಚುರುಕುತನ ಮತ್ತು ದೃಢತೆಯನ್ನು ಪ್ರದರ್ಶಿಸಿದರು. ಪ್ರತಿ ಕಾರ್ಯಕ್ರಮವು ಭಾಗವಹಿಸಿದವರಿಗೆ ಮತ್ತು ಪ್ರೇಕ್ಷಕರಿಗೆ ರೋಮಾಂಚನದ ಅನುಭವವನ್ನು ನೀಡಿತು.
ಮುಖ್ಯ ಅತಿಥಿಗಳಾಗು ಶ್ರೀಕಾಂತ್ ಕೆ. ಡಿವೈ. ಎಸ್ಪಿ. ಭಟ್ಕಳ್ ಮತ್ತು ಗೌರವ ಅತಿಥಿಗಳಾಗಿ ಭರತ್ ಕುಮಾರ್ ವಿ. ಪಿ. ಎಸ್. ಐ. ಮಂಕಿ, ಪೊಲೀಸ್ ಠಾಣೆ ಅವರು ಪಾಲ್ಗೊಂಡು ಸ್ಪರ್ಧಾಳುಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಶಾಲೆಯ ಅಧ್ಯಕ್ಷರಾದ ಆರ್ ನಾಯಕ್ ರವರುವಿದ್ಯಾರ್ಥಿಗಳನ್ನು ಉದ್ದೇಶಿಸಿ ಉತ್ಸಾಹದಾಯಕವಾದ ಮಾತುಗಳನ್ನಾಡಿ ಎಲ್ಲಾ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಹುರಿದುಂಬಿಸಿದರು. ವಿದ್ಯಾರ್ಥಿಗಳು ಕೇವಲ ಕಲಿಕೆಯಲ್ಲಿ ಮಾತ್ರ ಸಾಧನೆ ಮಾಡದೆ ಅವರ ಸರ್ವಾಂಗೀಣ ಅಭಿವೃದ್ಧಿಯ ಕುರಿತಾಗಿ ಕಾರ್ಯಕ್ರಮದುದ್ದಕ್ಕೂ ಹಿತನುಡಿಗಳನ್ನಾಡಿದರು.
ಒಟ್ಟಿನಲ್ಲಿ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಂಕಿಯಲ್ಲಿ ವಾರ್ಷಿಕ ಕ್ರೀಡಾ ದಿನವು ಅದ್ಭುತವಾದ ಯಶಸ್ಸನ್ನು ಕಂಡಿತು.ಇದು ಕ್ರೀಡಾ ಮನೋಭಾವ, ತಂಡದ ಕಾರ್ಯ ಮತ್ತು ದೈಹಿಕ ಸಾಮರ್ಥ್ಯದ ಮನೋಭಾವವನ್ನು ಬೆಳೆಸಿತು. ಶಾಲೆಯ ಆಡಳಿತ ಮಂಡಳಿ, ಪ್ರಿನ್ಸಿಪಾಲ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಈ ವರ್ಷದ ವಾರ್ಷಿಕ ಕ್ರೀಡಾ ದಿನವು ಎಲ್ಲರ ಮನದಲ್ಲಿ ಸವಿನೆನಪು ಉಳಿಯುವಂತೆ ಮಾಡಿತು.