ಅಕ್ರಮ ಮಸೀದಿಗೆ ಧ್ವನಿವರ್ಧಕ ಅಳವಡಿಸಿದಂತೆ ಮನವಿ.


ಅಂಕೋಲಾ : ಅಕ್ರಮ ಮಸೀದಿಗೆ ಧ್ವನಿವರ್ಧಕವನ್ನು ಅಳವಡಿಸದಂತೆ ಕ್ರಮ ಕೈಕೊಳ್ಳುವ ಕುರಿತು ಪಟ್ಟಣದ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಅಜ್ಜಿಕಟ್ಟಾ ನಾಗರಿಕರು ಶುಕ್ರವಾರ ತಹಸೀಲ್ದಾರ್ ಕಚೇರಿಗೆ, ಪುರಸಭೆಗೆ ಮತ್ತು ಅಂಕೋಲಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಸ್ಥಳೀಯ ನಾಗರಾಜ ನಾಯ್ಕ ಮಾತನಾಡಿ, ಇಲ್ಲಿಯ ಕಾರವಾರ ರಸ್ತೆ ಅಂಚಿನ ಸರ್ವೆ ನಂ.70ಎ1ಬಿ ಕ್ಷೇತ್ರ0-3-12ದಲ್ಲಿ ಅರ್ಖಮ್ ಇಸ್ಮಾಮಿಕ ಎಜುಕೇಶನ್ ಟ್ರಸ್ಟ್ ಎಂಬ ಹೆಸರಿನಲ್ಲಿ ಅರೇಬಿಕ್ ಕ್ಲಾಸ್ ನಡೆಸಲು ಬಹುಮಹಡಿಯ ಕಟ್ಟಡವನ್ನು ನಿರ್ಮಿಸಲಾಗಿದೆ. ಪುರಸಭೆಯಿಂದ ಪರವಾನಿಗೆ ಪಡೆಯದೆ ಆ ಕಟ್ಟಡದಲ್ಲಿ ಅಕ್ರಮವಾಗಿ ಮಸೀದಿಯನ್ನು ನಡೆಸುತ್ತಿರುವುದು ಕಂಡು ಬಂದಿದೆ. ಅರ್ಖಮ್ ಇಸ್ಮಾಮಿಕ ಎಜುಕೇಶನ್ ಟ್ರಸ್ಟ್ ನಡೆಸಲು ಪುರಸಭೆ ನೀಡಿದ ಪರವಾನಿಗೆ ಪತ್ರದಲ್ಲಿ ಷರತ್ತು ನಂ.2ರಲ್ಲಿ ಯಾವುದೇ ಧ್ವನಿವರ್ಧಕ ಅಳವಡಿ ಸತಕ್ಕದಲ್ಲ ಎಂದು ಷರತ್ತು ಹಾಕಿದ್ದು ಇರುತ್ತದೆ. ಇದರನ್ವಯವಾಗಿ ಧ್ವನಿವರ್ಧಕ ಅಳವಡಿಸಲು ಪರವಾನಿಗೆ ನೀಡಬಾರದೆಂದು ಒಮ್ಮತದಿಂದ ನಾವೆಲ್ಲರು ತಕರಾರುಪಡೆಸುತ್ತಿದ್ದೇವೆ. ಧ್ವನಿವರ್ಧಕದಿಂದ ಹಿರಿಯ ನಾಗರಿಕರು ಹಾಗೂ ಅಜ್ಜಿಕಟ್ಟಾ ಶಾಲೆಯ ವಿದ್ಯಾರ್ಥಿಗಳಿಗೆ, ಜನರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಎದ್ದು ಅಭ್ಯಾಸ ಮಾಡಲು ಮತ್ತು ಹಿರಿಯರಿಗೆ ನಿದ್ದೆ ಮಾಡಲು ತೊಂದರೆ ಯಾಗುತ್ತದೆ ಎಂದರು.
ಹಿರಿಯ ನಿವಾಸಿ ಓನಮ ಶೆಟ್ಟಿ ಮಾತನಾಡಿ, ಈ ಅಕ್ರಮ ಮಸೀದಿಯಲ್ಲಿ ಪ್ರತಿ ಶುಕ್ರವಾರ ನಮಾಜ್ ಮಾಡುವ ಪದ್ದತಿಯನ್ನು ರೂಡಿ ಮಾಡಿಕೊಂಡು ಬರುತ್ತಿದ್ದಾರೆ. ಎಜುಕೇಶನ್ ಟ್ರಸ್ಟ್ ಎನ್ನುವ ಕಟ್ಟಡದಲ್ಲಿ ಮಸೀದಿ ಮಾಡಿ ದಿನನಿತ್ಯ ನೂರಾರು ಜನರು ಬೇರೆ-ಬೇರೆ ರಾಜ್ಯ, ಜಿಲ್ಲೆ, ತಾಲೂಕಿನಿಂದ ಬರುತ್ತಿದ್ದು, ಇವರಿಗೆ ನಮಾಜ್ ಮಾಡಲು ಪರವಾನಿಗೆ ನೀಡಿದ್ದು ಯಾರು? ಈ ಕಟ್ಟಡದ ಎದುರಿನಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಷ್ಣು ನಾಯ್ಕ, ರವೀಂದ್ರ ನಾಯ್ಕ, ಮನೋಜ ನಾಯ್ಕ, ವಿನಾಯಕ ನಾಯ್ಕ, ಸಂತೋಷ ಇಳಿಗೇರಿ, ಅಜಯ ಆರ್.ನಾಯ್ಕ, ಸುರೇಶ ಎಸ್.ನಾಯ್ಕ, ಪ್ರಭಾಕರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.