ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟು ನಿಶ್ಚಿತಾ ಕಾಮತ್’ಳಿಗೆ ಸನ್ಮಾನ

ದಾಂಡೇಲಿ : ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕಿಗೆ ಕೀರ್ತಿಯನ್ನು ತಂದ ನಗರದ ಸೆಂಟ್‌ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಶ್ಚಿತಾ ಕಾಮತ್ ಇವಳನ್ನು‌ ಶಾಲೆಯಲ್ಲಿ ನಡೆದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಸನ್ಮಾನಿಸಲಾಯ್ತು.

ಈ ಸಂದರ್ಭದಲ್ಲಿ ಶಾಲಾ‌ ಮುಖ್ಯೋಪಾಧ್ಯಯಿನಿ ಸಿಸ್ಟರ್ ಸೆಲ್ವಿ, ಪತ್ರಕರ್ತ ಸಂದೇಶ್.ಎಸ್.ಜೈನ್, ನಗರ ಸಭೆಯ ಲೆಕ್ಕಾಧಿಕಾರಿ ಮೈಕಲ್ ಫರ್ನಾಂಡೀಸ್, ಸಿ.ಆರ್.ಪಿ ಶ್ರೀದೇವಿ, ಪಾಲಕರ ಸಂಘದ ಅಧ್ಯಕ್ಷ ರಿಯಾಜ್ ಬಾಬು ಸೈಯದ್, ದೈಹಿಕ ಶಿಕ್ಷಣ ಶಿಕ್ಷಕರಾದ ಡೇವಿಡ್ ದಾನಂ ಹಾಗೂ ಪಾಲಕರ ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.