ಅಪರೂಪದ ‘ಗ್ರೀನ್ ಸೀ’ ಕಡಲಾಮೆ ಕಳೇಬರ ಪತ್ತೆ.!

ಕಾರವಾರ: ತಾಲೂಕಿನ ದೇವಭಾಗ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಪ್ರಜಾತಿಯ ಕಡಲಾಮೆಯೊಂದರ ಕಳೇಬರ ಶನಿವಾರ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಈ ಕಡಲಾಮೆಯ ಮೃತದೇಹವನ್ನು ನೋಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ಒದಗಿಸಿದ್ದಾರೆ.

ಕಾರವಾರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಹಾಗೂ ಡಾ. ಶಂತನು ಕಲಂಬಿ ಅವರ ಮಾರ್ಗ ದರ್ಶನದಲ್ಲಿ ಮೃತ ಗ್ರೀನ್ ಸೀ ಕಡಲಾಮೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಆಮೆಯು ಸಣ್ಣ ಕರುಳಿನ ಅನಾರೋಗ್ಯದಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಕಡಲ ಜೀವಶಾಸ್ತ್ರ ವಿಭಾಗದ ಪ್ರಾಂಶುಪಾಲ್ ಜೆ. ಎಲ್. ರಾಥೋಡ, ಕೋಸ್ಟಲ್ ಮರೈನ್ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ ಹಾಗೂ ಪ್ರಕಾಶ ಯರಗಟ್ಟಿ ಇದ್ದರು.