ಭಟ್ಕಳದ ಮುಗಳಿಕೋಣೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ.04ರಿಂದ 09ರವರೆಗೆ ಅಯ್ಯಪ್ಪ ಸ್ವಾಮಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಅನ್ನದಾನ

ಭಟ್ಕಳ : ಮುಗಳಿಕೋಣೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ.4 ರಿಂದ 9ರವರೆಗೆ ಅಯ್ಯಪ್ಪ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ, ಅನ್ನದಾನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ..

ಜನವರಿ 4 ಗುರುವಾರದಂದು ಬೆಳೆಗ್ಗೆ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಬ್ರಹ್ಮಕೂರ್ಚ ಹವನ, ಹಾಗೂ ರಾತ್ರಿ ವಾಸ್ತು, ರಾಕ್ಷೋಘ್ನ ಹವನ, ಇಂದ್ರಾದಿ ಬಲಿ, ಕಲಶ ಸ್ಥಾಪನೆ ಕಾರ್ಯಕ್ರಮಗಳು ನಡೆಯಲಿವೆ. ಜನವರಿ 5 ಶುಕ್ರವಾರ ಸ್ಥಾನಶುದ್ಧಿ, ಬಿಂಬಶುದ್ಧಿ, ಅಧಿವಾಸ 7.45ರ ಧನುರ್ ಲಗ್ನದಲ್ಲಿ ಅಯ್ಯಪ್ಪ ಸ್ವಾಮಿ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಮುಖ ಮಂಟಪದ ಉದ್ಘಾಟನಾ ಕಾರ್ಯಕಮ ನಡೆಯಲಿದೆ. ನಂತರ ಕಲಾಭಿವೃದ್ಧಿ ಹೋಮ, ಗಣಹೋಮ, ಕುಂಭಾಭಿಷೇಕ, ಮಹಾಪೂಜೆ, ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಬಳಿಕ 12-30ರಿಂದ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

6ನೇ ತಾರೀಖು ಶನಿವಾರ ಬೆಳೆಗ್ಗೆ 9.30ಕ್ಕೆ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮರುದಿನ ಸ್ವಾಮಿಯವರಿಗೆ ಇರುಮುಡಿ ಕಟ್ಟವುದು ಹಾಗೂ 9ನೇ ತಾರೀಖಿನಂದು 9.30ಕ್ಕೆ ಅಯ್ಯಪ್ಪ ಮಾಲಾಧಾರಿಗಳು ಶಬರಿ ಮಲೆ ಯಾತ್ರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ..

ಇನ್ನೂ 5ನೇ ತಾರೀಖು ಶನಿವಾರ ಗೋಪಾಲ ಕೃಷ್ಣ ಕಲ್ಯಾಣ ಮಂಟಪದಲ್ಲಿ 46ನೇ ಶಬರಿ ಯಾತ್ರೆಯ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಭಕ್ತಾಧಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದ್ದಾರೆ.

ವಿರೇಶ್, ನುಡಿಸಿರಿ ನ್ಯೂಸ್, ಭಟ್ಕಳ್