ಕಾಂಗ್ರೆಸ್ ಪಕ್ಷಕ್ಕೆ ತಲೆಯು ಇಲ್ಲ,  ಬುಡವು ಇಲ್ಲವೆಂದ ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ

ಭಟ್ಕಳ: ಕಾಂಗ್ರೆಸ್ ಪಕ್ಷಕ್ಕೆ ತಲೆಯು ಇಲ್ಲ,  ಬುಡವು ಇಲ್ಲವೆಂದು ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ ಭಟ್ಕಳದಲ್ಲಿ ವ್ಯಂಗ್ಯವಾಡಿದ್ದಾರೆ.

ಅವರು ಭಟ್ಕಳ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ದಲ್ಲಿ ಮಾತನಾಡಿದರು. ನಾನು ಪರೀಕ್ಷೆಯಲ್ಲಿ ಫಾಸ್ಟ್ ರ್ಯಾಂಕ್ ಬಂದಿದ್ದೇನೆ. ಆದರೆ ಕಳೆದ ಬಾರಿ  ಚುನಾವಣೆಯಲ್ಲಿ ನಾನು ಸುತ್ತಿದ್ದೇನೆ. ನನ್ನನ್ನು ಸೋಲಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ನಾನು ಸೋತಿರುದಕ್ಕಿಂತ ಬಿಜೆಪಿ ಕಾರ್ಯಕರ್ತರ ಮೇಲೆ ಅಭಿಮಾನ ಹುಟ್ಟಿತು ಕಾರ್ಯಕರ್ತರು, ಅಲ್ಲಿ ನನಗೆ ಅಭಿಮಾನ ಬಂತು ನಾನು ಸೋತಿರ ಬಹುದು ಆದರೆ ಎದುರಾಳಿ ಪಕ್ಷದಲ್ಲಿ ಎಷ್ಟೇ ಬಲಿಷ್ಠ ಅಭ್ಯರ್ಥಿ ನಿಂತಿದ್ದರು ಕೂಡ ಅಂತ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತನಿಗಿದೆ

ಇನ್ನು ಬಿಜೆಪಿ ಪಕ್ಷ ಎನ್ನುವುದು ಕಾರ್ಯಕರ್ತರ ಪಕ್ಷ ಎನ್ನುವುದು ಸತ್ಯ. ತಲೆ‌ಬುಡ ಇಲ್ಲದ ಪಕ್ಷದ ಕಾಂಗ್ರೆಸ್ ಆಗಿದೆ.ಕಾಂಗ್ರೆಸ್ ಪಕ್ಷದ ದಲ್ಲಿ ಕೇಂದ್ರದಲ್ಲಿ(ತಲೆ) ಸರಿಯಾದ ನಾಯಕರಿಲ್ಲ ಬೂತ್(ಬುಡ)ಮಟ್ಟದಲ್ಲಿ ಸರಿಯಾದ ಕಾರ್ಯಕರ್ತರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ

ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಬರಲು 2 ಕಾರಣ ವಿದೆ

‘ಕಾಂಗ್ರೆಸ್ ಬಿಟ್ಟು ಬಂದವರಲ್ಲಿ ನಾನು ಸಹ ಇದ್ದು, ಎರಡು ಕಾರಣಕ್ಕೆ ನಾನು ಕಾಂಗ್ರೆಸ್  ಪಕ್ಷ ತೊರೆದಿದ್ದೇನೆ. ಮೊದಲು ಕೋವಿಡ ಸಂಧರ್ಭದಲ್ಲಿ ಜಗತ್ತು ತತ್ತರಿಸುವ ವೇಳೆ ಭಾರತದಲ್ಲಿ ಮೋದಿ ನಿಭಾಯಿಸಿದ ರೀತಿ ನಾನು ಮೆಚ್ಚಿ ಪಕ್ಷಕ್ಕೆ ಬಂದಿದ್ದೇನೆ. ದೇಶದಲ್ಲಿ ಎರಡು ಹಂತದ ವಾಕ್ಸಿನ್ ನೀಡಿ ಉಳಿದಂತೆ 50 ದೇಶಕ್ಕೆ ವಾಕ್ಸಿನ್ ನೀಡಿದ್ದಾರೆ.

ದೇಶವನ್ನು ಅಲ್ಲಿನ ಜನರನ್ನು ಉಳಿಸುವ ಕೆಲಸದಲ್ಲಿ ಮೋದಿ ಲಾಕ್ ಡೌನ ಮಾಡಿದ್ದಾರೆ. ಇನ್ನು ಒಂದು ಸರ್ವೇಯ ಪ್ರಕಾರ ಉಡುಪಿಯಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿರುವ ವೇಳೆ 5 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು ಸಹ ನನ್ನನ್ನು ಸೋಲಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ನಾನು ಸೋತಿರುದಕ್ಕಿಂತ ಬಿಜೆಪಿ ಕಾರ್ಯಕರ್ತರ ಮೇಲೆ ಅಭಿಮಾನ ಹುಟ್ಟಿತು. ಇನ್ನು ಬಿಜೆಪಿ ಪಕ್ಷ ಎನ್ನುವುದು ಕಾರ್ಯಕರ್ತರ ಪಕ್ಷ ಎನ್ನುವುದು ಸತ್ಯ. ತಲೆ‌ಬುಡ ಇಲ್ಲ ದ ಪಕ್ಷದ ಕಾಂಗ್ರೆಸ್ ಆಗಿದೆ. ಈ ಚುನಾವಣೆಯಲ್ಲಿ ನಾವುಗಳು ಮೋದಿ ಅವರನ್ನು  ಬಲಪಡಿಸಿ ಸುನೀಲ ನಾಯ್ಕ ಅವರಿಗೆ ಮತ ನೀಡಬೇಕಿದೆ ಎಂದು ಹೇಳಿದರು.