ಮಾಜಿ  ಕಾಂಗ್ರೆಸ್ ಜಿ.ಪಂ ಸದಸ್ಯ ದೀಪಕ ನಾಯ್ಕ ಮಂಕಿ ಬಿಜೆಪಿ ಗೆ ಸೇರ್ಪಡೆ

ಭಟ್ಕಳ:  ಮಂಕಿ ಮಾಜಿ ಕಾಂಗ್ರೆಸ್ ಜಿಲ್ಲಾ ಪಂಚಾಯತ ಸದಸ್ಯ ದೀಪಕ ನಾಯ್ಕ ಮಂಕಿ ಇಂದು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು

ಬಳಿಕ ಮಾತನಾಡಿದ ಅವರು ‘ಕಾಂಗ್ರೆಸ್ ಪಕ್ಷದ ಧೋರಣೆ, ಮುಖಂಡರ ನಿರ್ಲಕ್ಷ್ಯ ಮತ್ತು ಹಾಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ವರ್ತನೆಗೆ ಬೇಸತ್ತು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೇವೆ. ಇದು ಪ್ರಾರಂಭಿಕ ಹಂತದಲ್ಲಿ ಸೇರ್ಪಡೆಯಾಗಿದ್ದು ನಮಗೆ ಸಾಕಷ್ಟು ಕಾಂಗ್ರೆಸ್ ಪಕ್ಷದ ಮುಖಂಡರು ಸಂಪರ್ಕದಲ್ಲಿದ್ದು ಮುಂದಿನ ದಿನಗಳಲ್ಲಿ ಅವರು ಸಹ ಬಿಜೆಪಿ ಸೇರಲಿದ್ದಾರೆ. ಆರ್.ವಿ‌.ದೇಶಪಾಂಡೆ ಹಾಗೂ ದಿವಂಗತ ಶಂಭು ಗೌಡ ಅವರ ಗರಡಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬೆಳೆದು‌ಬಂದಿದ್ದೇನೆ. ಕಾಂಗ್ರೆಸನಿಂದ ಜಿಲ್ಲಾ ಪಂಚಾಯತ ಸ್ಪರ್ಧೆಯ ವೇಳೆ ಪಕ್ಷೇತರರನ್ನು ಹಿಂಬದಿಯಿಂದ ಕಾಂಗ್ರೆಸ ಪಕ್ಷದ ಮುಖಂಡರೇ ನನ್ನ ಸೋಲಿಗೆ ಹುನ್ನಾರ ನಡೆಸಿದರು ಸಹ ಜನರು ಗೆಲ್ಲಿಸಿದ್ದಾರೆ‌. ಅಲ್ಲಿಂದ ನನ್ನನ್ನು ಕಾಂಗ್ರೆಸನಲ್ಲಿ ಮೂಲೆಗುಂಪು ಮಾಡುವ ಕೆಲಸವಾಯಿತು. ಇವೆಲ್ಲವೂ ಹೈಕಮಾಂಡಗೆ ತಂದರು ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದ ಅವರು ಕುಮಟಾದಲ್ಲಿ ನಡೆದ ಸಮಾವೇಶದಲ್ಲಿ ವೇದಿಕೆಯಲ್ಲಿ ನಮಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದರು ಸಹ ಕಾಂಗ್ರೆಸನ ಯಾವುದೇ ನಾಯಕರು ಸಹ ನಮ್ಮ ಪರವಾಗಿ ಇಲ್ಲದಿರುವುದು ಬೇಸರಗೊಂಡಿತ್ತು. ಬಳಿಕ ಮಾಜಿ ಶಾಸಕರಿಗೆ ಟಿಕೆಟ್ ಘೋಷಣೆಯಾದಾಗಲು ಸಹ ವಿರೋಧಿಸದೇ ಬಂಡಾಯ ಎಳದೇ ಪಕ್ಷದ ನಿರ್ಧಾರಕ್ಕೆ ಸಹಮತ ನೀಡಿದೆವು. ಅವರ ನಾಮಪತ್ರ ಸಲ್ಲಿಕೆಗೂ ಸಹ ನಮ್ಮನ್ನು ಸಂಪರ್ಕಿಸಿದೇ ಇದ್ದ ನಂತರ ಬಿಜೆಪಿ ಸೇರ್ಪಡೆಯ ನಿರ್ಧಾರವನ್ನು ನನ್ನ ಕಾರ್ಯಕರ್ತರು ಅಭಿಮಾನಿಗಳ ಅಭಿಪ್ರಾಯ ಪಡೆದು ಸೇರಿದ್ದೇವೆ ಎಂದರು.

ಬಿಜೆಪಿ ಸೇರ್ಪಡೆಗೆ ನನ್ನದು ಯಾವುದೇ ಸೇರ್ಪಡೆಯಿಲ್ಲವಾಗಿದ್ದು, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮುಂದುವರೆಸಲಿದ್ದೇನೆ. ಪ್ರಧಾನಿ ಮೋದಿ ಅವರ ನಾಯಕತ್ವ, ಆದರ್ಶ ಮತ್ತು ಶಾಸಕ ಸುನೀಲ ನಾಯ್ಕ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಕ್ಷೇತ್ರದ ಅಭಿವೃದ್ಧಿ ಹರಿಕಾರ ಎನ್ನಬಹುದಾಗಿದೆ. ಸುನೀಲ ನಾಯ್ಕ ಅವರ ಗೆಲುವಿಗೆ ನನ್ನ ಶತಪ್ರಯತ್ನ ಸಹ ಇರಲಿದೆ ಎಂದರು.