ಭಟ್ಕಳ: ಕ್ಷೇತ್ರದಲ್ಲಿಯಾಗಲಿ ಅಥವಾ ರಾಜ್ಯದಲ್ಲಿ ಆಗಲಿ ಕುಡಿಯುವ ನೀರಿಗೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎನ್ನುವ ಬೇದ ಮಾಡಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಕುಡಿಯುವ ನೀರಿಗಾಗಿ ತೆರೆಯುತ್ತಿರುವ ಬೋರವೆಲ್ ಕೆಲಸ ನಿಲ್ಲಿಸುವ ಕೆಲಸ ಮಾಡುತ್ತಿರುವುದು ಸಮಂಜಸವಲ್ಲ ಇದನ್ನು ಮೊದಲು ನಿಲ್ಲಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ಮಳೆಯಾಗದ ಹಿನ್ನೆಲೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ತತ್ವಾರ ಹೆಚ್ಚಾಗಿದ್ದು, ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಲವೊಂದು ಕಡೆಗಳಲ್ಲಿ ಜನರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಬೋರವೆಲ್ ತೆಗೆಸುವ ಕೆಲಸ ಮಾಡುತ್ತಿದ್ದೇವೆ ಇನ್ನು ಕೆಲವು ಕಡೆ ಅಲ್ಲಿನವರೇ ಸ್ವತಃ ಖರ್ಚಿನಲ್ಲಿ ಬೋರವೆಲ್ ತೆಗೆಸುತ್ತಿದ್ದರೆ ಅದನ್ನು ತಡೆದು ಕೆಲಸಕ್ಕೆ ಅಡ್ಡಿಪಡಿಸುವ ಕಾರ್ಯವು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಮಂಕಾಳ ವೈದ್ಯ ಅವರು ಮಾಡುತ್ತಿದ್ದಾರೆ. ಬೋರವೆಲ್ ವಾಹನವನ್ನು ತಡೆದು ವಾಪಸ್ಸು ಕಳುಹಿಸುವ ಕೆಲಸ ಮಾಡುತ್ತಿರುವುದು ಅವರು 5 ವರ್ಷ ಶಾಸಕರಾಗಿ ಕೆಲಸ ಮಾಡಿರುವದನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಇನ್ನು ನೀತಿ ಸಂಹಿತೆಗಿಂತ ಮೊದಲು ಆರಂಭವಾದ ರಸ್ತೆಗಳ ಕಾಮಗಾರಿಯನ್ನು ನಿಲ್ಲಿಸುವ ಕೆಲಸ ಮಾಡುತ್ತಿರುವುದು ಅವರ ಕಾರ್ಯಕರ್ತರಿಂದ ಆಗುತ್ತಿದೆ. ಕೇವಲ ಬಾಯಲ್ಲಿ ನಾವೆಲ್ಲರು ಒಂದು ಒಂದು ಜನರಿಗೆ ಸಂದೇಶ ನೀಡುವ ನೀವುಗಳು ಈ ರೀತಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕೇವಲ 6 ತಿಂಗಳ ಅವದಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಜಲ ಜೀವನ ಮಿಷನ ಅಡಿಯಲ್ಲಿ 240 ಕೋಟಿ ಅನುದಾನದಲ್ಲಿ ಇಡಗುಂಜಿಯಲ್ಲಿ ಗುದ್ದಲಿ ಪೂಜೆ ನಡೆದಿದ್ದು ಇದು ಭಟ್ಕಳ ಬೆಳಕೆ ಗ್ರಾಮ ತನಕ ನೀರಿನ ಪೂರೈಕೆಯಾಗಲಿದ್ದು ಮನೆ ಮನೆಗೆ ಗಂಗೆ ಎಂಬ ಯೋಜನೆ ಜನರಿಗೆ ಲಭಿಸಲಿದೆ. ಕೇವಲ 4 ತಿಂಗಳು ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ನಿಮಗೆ ಕೋಪವಿದ್ದರೆ ನೇರವಾಗಿ ನನ್ನ ಮೇಲೆ ಸವಾಲಗೆ ಬನ್ನಿ ಅದನ್ನು ಬಿಟ್ಟು ಜನರಿಗೆ ಸಮಸ್ಯೆ ನೀಡಬೇಡಿ ಎಂದ ಅವರು ನನ್ನ ವೈಯಕ್ತಿಕ ಲೆಕ್ಕಗಳನ್ನು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೀರಿ. ಹಾಗೂ ಪಿಎಲ್ಡಿ ಬ್ಯಾಂಕಿನಲ್ಲಿ ಸುನೀಲ ನಾಯ್ಕ ಅವರ ವ್ಯವಹಾರದ ಬಗ್ಗೆಯೂ ಕೇಳಿದ್ದೀರಿ ಇವೆಲ್ಲದಕ್ಕು ಉತ್ತರ ನೀಡಲಿದ್ದೇನೆ ಎಂದ ಅವರು ಇಲ್ಲವಾದಲ್ಲಿ ಮುಂದಿನ ಪರಿಣಾಮ ನೀವೆ ಎದುರಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ ಮಧ್ವರಾಜ ಮಾತನಾಡಿ ‘ ಕಾಂಗ್ರೆಸ್ ಜೆಡಿಎಸ್ ಅಲ್ಪಸಂಖ್ಯಾತರ ಪರವಾಗಿದೆಯೋ ನಮ್ಮ ಬಿಜೆಪಿ ಪಕ್ಷ ಎಂದರೆ ಅದು ಹಿಂದುಗಳ ರಕ್ಷಣೆಗೆ ಇರುವುದಾಗಿದೆ. ಭಟ್ಕಳ ಕ್ಷೇತ್ರದಲ್ಲಿ ಪ್ರಮುಖವಾಗಿ ಅಭಿವೃದ್ಧಿ, ಹಿಂದುತ್ವ ಹಾಗೂ ರಾಷ್ಟ್ರೀಯತೆಯನ್ನು ನಂಬಿದವರಾಗಿದ್ದಾರೆ. ಆದರೆ ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರು ಪ್ರಧಾನಿ ಆದರೆ ದೇಶದಲ್ಲಿ ಸನಾತನ ಧರ್ಮದ ಪುನರ್ ಸ್ಥಾಪನೆಯಾಗಲಿದೆ ಎಂದು ಹೇಳುವ ಮೂಲಕ ಜಗತ್ತೆ ಮೆಚ್ಚಿರುವ ಸನಾತನ ಧರ್ಮದ ವಿರೋಧ ಇದ್ದಾರೆ ಎನ್ನುವುದು ಸ್ಪಷ್ಟಪಡಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರು ಸಾಕಷ್ಟು ಬಾರಿ ಹಿಂದುತ್ವದ ವಿರೋಧಿಗಳು ಎಂದು ಪ್ರತಿಪಾದಿಸಿದ್ದಾರೆ. ಆದರೆ ಬಿಜೆಪಿ ದೇಶದ ಶೇ. 80 ರಷ್ಟಿರುವ ಹಿಂದುಗಳ ಪರವಾಗಿದ್ದು ನಮ್ಮ ಸನಾತನ ಧರ್ಮ ಪ್ರತಿಪಾದಿಸುವದರಲ್ಲಿ ಯಾವುದು ತಪ್ಪಿಲ್ಲ ಎಂದರು.
ಕ್ಷೇತ್ರದ ಓರ್ವ ಶಾಸಕರಾದವರಿಗೆ 5 ವರ್ಷದಲ್ಲಿ ಯಾವುದೇ ಯೋಜನೆ ಅಥವಾ ಯೋಚನೆ ಸಾಕಾರಗೊಳಿಸಲು ಸಾಧ್ಯವಿಲ್ಲ. ಆದರು ಸಹ ಶಾಸಕ ಸುನೀಲ ನಾಯ್ಕ ಅವರು ಅಭಿವೃದ್ಧಿ ಕಾರ್ಯ ಮೆಚ್ಚುವಂತಹದ್ದಾಗಿದೆ. ಆದ್ದರಿಂದ ಪಕ್ಷ ಅವರಿಗೆ ಇನ್ನೊಂದು ಅವಧಿಗೆ ಅವಕಾಶ ನೀಡಿದ್ದು, ಭಟ್ಕಳ ಕ್ಷೇತ್ರಕ್ಕೆ ಪುನರಪಿಯಾಗಿ ಸುನೀಲ ನಾಯ್ಕ ಮತ್ತೆ ಜನರು ಆಯ್ಕೆ ಮಾಡಲಿದ್ದಾರೆ. ದೇಶ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರಗಳಿದ್ದರೆ ಅಭಿವೃದ್ಧಿಯ ಕೆಲಸಕ್ಕೆ ಇನ್ನಷ್ಟು ವೇಗ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಗೋವಾ ಶಾಸಕ ಉಲ್ಲಾಸ ತೆನೆಕರ್, ಗೋವಿಂದ ನಾಯ್ಕ, ಸುಬ್ರಾಯ ದೇವಾಡಿಗ ಮುಂತಾದವರು ಇದ್ದರು.