Mann Ki Baat: ಯಾವ ದೇಶ ನಾವೀನ್ಯತೆಗೆ ಅವಕಾಶ ನೀಡುವುದಿಲ್ಲವೋ ಆ ದೇಶದ ಅಭಿವೃದ್ಧಿ ಅಲ್ಲಿಗೆ ನಿಲ್ಲುತ್ತದೆ: ಮೋದಿ

ಯಾವ ದೇಶ ನಾವೀನ್ಯತೆ, ಹೊಸ ಆವಿಷ್ಕಾರಕ್ಕೆ ಅವಕಾಶ ನೀಡುವುದಿಲ್ಲವೋ ಆ ದೇಶದ ಅಭಿವೃದ್ಧಿ ಅಲ್ಲಿಗೆ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2023ರ ಕೊನೆಯ ಮನ್​ಕಿ ಬಾತ್​(Mann Ki Baat)ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಎಂದೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯವು ನಿಲ್ಲದಂತೆ ನೋಡಿಕೊಳ್ಳೋಣ. ನಾವು ಒಟ್ಟಾಗಿ ಪ್ರಯತ್ನ ನಡೆಸಿದಾಗಲೆಲ್ಲಾ ದೇಶಕ್ಕೆ ಹೆಚ್ಚಿನ ಲಾಭವಾಗಿದೆ. ದೇಶದಲ್ಲಿ 70 ಸಾವಿರ ಅಮೃತ ಸರೋವರಗಳ ನಿರ್ಮಾಣವೂ ನಮ್ಮ ಸಾಧನೆಯಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮನ್​ಕಿ ಬಾತ್​ನ ಪ್ರಮುಖಾಂಶಗಳು -ಈ ವರ್ಷ ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ. ದೇಶವು ಐದನೇ ಅತಿದೊಡ್ಡ ಆರ್ಥಿಕತೆಯಾಯಿತು. G20 ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇಂದು ದೇಶದ ಮೂಲೆ ಮೂಲೆಗಳಲ್ಲಿ ಆತ್ಮವಿಶ್ವಾಸ ತುಂಬಿದೆ. ಮುಂದಿನ ವರ್ಷವೂ ಈ ಉತ್ಸಾಹವನ್ನು ಉಳಿಸಿಕೊಳ್ಳಬೇಕು. -ಚಂದ್ರಯಾನ-3ರ ಯಶಸ್ಸಿಗಾಗಿ ಹಲವರು ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮಹಿಳಾ ವಿಜ್ಞಾನಿಗಳನ್ನು ವಿಶೇಷವಾಗಿ ಪ್ರಶಂಸಿಸಲಾಗುತ್ತಿದೆ.

-#ShriRamBhajan ಈ ಹ್ಯಾಶ್​ಟ್ಯಾಗ್​ನಲ್ಲಿ ಶ್ರೀರಾಮ ಭಜನೆಯನ್ನು ಹಾಡಿ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಇಡೀ ದೇಶದಲ್ಲಿ ಉತ್ಸಾಹ ಮೂಡಿದೆ. ಜನರು ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಎಲ್ಲಾ ರಚನೆಗಳನ್ನು ಸಾಮಾನ್ಯ ಹ್ಯಾಶ್ ಟ್ಯಾಗ್‌ನೊಂದಿಗೆ ಹಂಚಿಕೊಳ್ಳಬೇಕು.

-ನಾಟು-ನಾಟು ಆಸ್ಕರ್ ಪ್ರಶಸ್ತಿ ಪಡೆದಾಗ ಇಡೀ ದೇಶವೇ ಸಂತಸಗೊಂಡಿತ್ತು. ನಮ್ಮ ಕ್ರೀಡಾಪಟುಗಳು ಈ ವರ್ಷವೂ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಹಲವು ಕ್ರೀಡೆಗಳಲ್ಲಿ ಆಟಗಾರರ ಸಾಧನೆ ದೇಶದ ಘನತೆಯನ್ನು ಹೆಚ್ಚಿಸಿದೆ.

-ಭಾರತ ಅಭಿವೃದ್ಧಿ ಹೊಂದಿದಾಗ ಯುವಜನತೆ ಅದರ ಲಾಭ ಪಡೆಯುತ್ತಾರೆ ಎಂದು ಪ್ರಧಾನಿ ಹೇಳಿದರು. ಆದರೆ ಯುವಕರು ಫಿಟ್​ ಆಗಿರುವುದು ಕೂಡ ಅಷ್ಟೇ ಮುಖ್ಯ.

– ಕಾಶಿ-ತಮಿಳು ಸಂಗಮದಲ್ಲಿ ಪಾಲ್ಗೊಳ್ಳಲು ತಮಿಳುನಾಡಿನಿಂದ ಸಾವಿರಾರು ಜನರು ಕಾಶಿ ತಲುಪಿದ್ದರು. ಅಲ್ಲಿ ನಾನು ಅವರೊಂದಿಗೆ ಸಂವಹನ ನಡೆಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಲ್ ಟೂಲ್ ಭಾಷಿಣಿಯನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದೆ, ನಾನು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರೆ ಅದು ತಮಿಳಿಗೆ ಭಾಷಾಂತರವಾಗುತ್ತಿತ್ತು.

-ನಿಯಮಿತ ವ್ಯಾಯಾಮ ಮತ್ತು 7 ಗಂಟೆಗಳ ಸಂಪೂರ್ಣ ನಿದ್ರೆ ದೇಹಕ್ಕೆ ಬಹಳ ಮುಖ್ಯ ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ.

-ಭಾರತವು ಇನ್ನೋವೇಷನ್ ಹಬ್ ಆಗುತ್ತಿರುವುದು ಎಂದೂ ನಾವು ನಿಲ್ಲುವುದಿಲ್ಲ ಎಂಬುದರ ಸಂಕೇತವಾಗಿದೆ.

-2015 ರಲ್ಲಿ ನಾವು ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ 81 ನೇ ಸ್ಥಾನವನ್ನು ಪಡೆದಿದ್ದೇವೆ, ಇಂದು ನಾವು 40 ನೇ ಸ್ಥಾನದಲ್ಲಿದ್ದೇವೆ ಎಂದರು.

ತಮ್ಮ ಫಿಟ್​ನೆಸ್​ ರಹಸ್ಯ ಹಂಚಿಕೊಂಡ ಅಕ್ಷಯ್ ಕುಮಾರ್​ಮನ್​ಕಿ ಬಾತ್​ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಫಿಟ್​ನೆಸ್​ ಮಂತ್ರವನ್ನು ಹಂಚಿಕೊಂಡಿದ್ದಾರೆ. ನನಗೆ ಫ್ಯಾನ್ಸಿ ಜಿಮ್​ಗಿಂತ ಹೆಚ್ಚಾಗಿ ಸ್ವಾಭಾವಿಕವಾಗಿ ಹೇಗೆ ಫಿಟ್​ ಆಗಿರುವುದು ಎಂಬುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಬ್ಯಾಡ್​ಮಿಂಟನ್​ ಆಡುವುದು, ಈಜುವುದು, ಮೆಟ್ಟಿಲುಗಳನ್ನು ಹತ್ತುವುದು, ವ್ಯಾಯಾಮ ಮಾಡುವುದು ಹೀಗೆ.

ಉತ್ತಮವಾದ ಹಾಗೂ ಆರೋಗ್ಯಕರವಾದ ಆಹಾರವನ್ನು ತಿನ್ನುವುದು ಕೂಡ ಮುಖ್ಯವಾಗುತ್ತದೆ. ಶುದ್ಧ ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ದಪ್ಪಗಾಗುವ ಭಯದಿಂದ ತುಪ್ಪವನ್ನು ತಿನ್ನುವುದಿಲ್ಲ. ಯಾವುದು ಕೆಟ್ಟದ್ದು ಮತ್ತು ನಮ್ಮ ಫಿಟ್‌ನೆಸ್‌ಗೆ ಯಾವುದು ಒಳ್ಳೆಯದು ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ವೈದ್ಯರ ಸಲಹೆಯಂತೆ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದರು. ನೀವು ಹೇಗಿದ್ದರೂ ಅದನ್ನು ಸಂತೋಷದಿಂದ ಸ್ವೀಕರಿಸಿ, ಫಿಲ್ಟರ್​ ಜೀವನ ಬೇಡ, ಫಿಟ್ಟರ್ ಜೀವನ ಬೇಕು ಎಂದರು.

ಹರ್ಮನ್​ ಪ್ರೀತ್ ಕೌರ್ ಮಾತು ಮಹಿಳಾ ಕ್ರಿಕೆಟಿಗರಾದ ಹರ್ಮನ್ ಪ್ರೀತ್ ಕೌರ್​ ಕೂಡ ಈ ಕುರಿತು ಮಾತನಾಡಿದ್ದಾರೆ, ನಿರಂತರ ವ್ಯಾಯಾಮ ಮತ್ತು 7 ಗಂಟೆಗಳ ಸಂಪೂರ್ಣ ನಿದ್ರೆ ದೇಹಕ್ಕೆ ಬಹಳ ಮುಖ್ಯ ಅದು ನೀವು ಫಿಟ್​ ಆಗಿರಲು ಸಹಾಯ ಮಾಡುತ್ತದೆ.