ಜೋಯಿಡಾ : ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂಗವೆ ಗ್ರಾಮದ ಕಿರು ಸೇತುವೆ ಹಾಳಾಗಿದ್ದು, ಇದರಿಂದಾಗಿ ಈ ಭಾಗದ ಜನರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ.
ಈ ಹಿಂದೆ ಮಳೆಗಾಲದಲ್ಲಿ ಈ ಸೇತುವೆ ಹಾಳಾಗಿದ್ದು, ಒಂದು ಭಾಗದಲ್ಲಿ ಸೇತುವೆಗೆ ಸಿರ್ಮಿಸಿದ ಸಿಮೆಂಟಿನ ಕಟ್ಟೆ ಒಡೆದು ಹೋಗಿ ಅಪಾಯಕಾರಿಯಾಗಿದೆ. ಅಲ್ಲದೆ ಸೇತುವೆಯ ಬಲಭಾಗದಲ್ಲಿ ಮಣ್ಣು ಕುಸಿದು ಭಾರವಾದ ವಾಹನಗಳು ಹೋಗಲು ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ರೈತರ ಗೊಬ್ಬರ, ಅಡಿಕೆ, ಭತ್ತ ಇತರೆ ವಸ್ತುಗಳನ್ನು ಸಾಗಿಸಲು ಸಮಸ್ಯೆ ಉಂಟಾಗುತ್ತಿದೆ.
ಈ ಬಗ್ಗೆ ಜಿ.ಪಂ.ಇಲಾಕೆ , ತಾಲೂಕಾಡಳಿತ ಗಮನಹರಿಸಿ ಕೂಡಲೇ ಇಲ್ಲಿ ಸೇತುವೆ ನಿರ್ಮಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.
ಸೇತುವೆ ಹಾಳಾದ ಕಾರಣ ನಮ್ಮ ಗ್ರಾಮದ ಬಹಳಷ್ಟು ಮನೆಗಳಿಗೆ ದೊಡ್ಡ ವಾಹನ ಬರಲು ಸಮಸ್ಯೆ ಉಂಟಾಗುತ್ತಿದೆ, ಮಳೆಗಾಲದಲ್ಲಿ ಹೆಚ್ವಿನ ಮಳೆ ಉಂಟಾದರೆ ಸೇತುವೆ ದಾಟಲು ಸಮಸ್ಯೆಯಾಗುತ್ತಿದೆ. ಕೂಡಲೇ ಸರ್ಕಾರ ಸೇತುವೆ ನಿರ್ಮಿಸಿ ಕೊಡಬೇಕೆಂದು ಸ್ಥಳೀಯರಾದ ಭಾಸ್ಕರ್ ಭಟ್ ಅವರು ಭಾನುವಾರ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.