ಹಿಂದೂ ಮಹಾಸಾಗರದಲ್ಲಿ ಇಂದು (ಡಿ.23) ವ್ಯಾಪಾರಿ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಯಾವುದೇ ಸಾವು-ನೋವುಗಳ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಒಂದು ಹಡಗು ಇಸ್ರೇಲ್‌ಗೆ ಸಂಬಂಧಿಸಿದೆ ಎಂದು ವರದಿ ತಿಳಿಸಿದೆ. ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ ಮತ್ತು ಕಡಲ ಭದ್ರತಾ ಸಂಸ್ಥೆ ಅಂಬ್ರೆ ಪ್ರಕಾರ, ಭಾರತದ ಕರಾವಳಿ ಭಾಗದಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಿಂದ ಹಡುಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ. ಇದು ಇಸ್ರೇಲ್ನ ಲೈಬೀರಿಯಾ-ಫ್ಲಾಗ್ಡ್ ರಾಸಾಯನಿಕ/ಉತ್ಪನ್ನಗಳ ಟ್ಯಾಂಕರ್ಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಎಂದು ಹೇಳಲಾಗಿದೆ.
ಇನ್ನು ಈ ದಾಳಿಗೆ ಭಾರತೀಯ ನೌಕಾಪಡೆ ಪ್ರತ್ಯುತ್ತರ ನೀಡುತ್ತಿದೆ ಎಂದು ಹೇಳಲಾಗಿದೆ. ಇನ್ನು ದಾಳಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಇಸ್ರೇಲ್ಗೂ ವರದಿ ಮಾಡಲಾಗಿದೆ. ಇನ್ನು ಈ ದಾಳಿ ಎಲ್ಲಿಂದ ನಡೆದಿದೆ ? ಯಾರು ನಡೆಸಿದ್ದಾರೆ ಎಂದು ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ. ಭಾರತ ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಳ್ಳುವಂತೆ ನೌಕ ದಳಕ್ಕೆ ತಿಳಿಸಿದೆ.