ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ, ಅಲರ್ಟ್​ ಆದ ಪೊಲೀಸರು; ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನ್​

ಬೆಂಗಳೂರು, ಡಿ.15: ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ. ಈ ಹಿನ್ನಲೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನಿಂಗ್​ ನಡೆಸಿದ್ದಾರೆ. ನಗರದ ಬ್ರಿಗೇಡ್ ರೋಡ್ ಎಂಜಿ ರಸ್ತೆ ಯಲ್ಲಿ ಹೊಸ ಅಲೆಯ ವರ್ಷಾಚರಣೆಗೆ ಹೆಚ್ಚಿನ ಜನ ಸೇರುತ್ತಾರೆ. ಹಾಗಾಗಿ ಪ್ರತಿ ಬಾರಿ ಒಂದಷ್ಟು ಗೊಂದಲ ಮತ್ತು ಅಹಿತಕರ ಘಟನೆ ನಡೆಯುತ್ತದೆ. ಈ ಬಾರಿ ಆ ರೀತಿ ಆಗದಂತೆ ಕೇಂದ್ರ ವಿಭಾಗ ಪೊಲೀಸರು, ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.

ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಸಿದ್ಧತೆ

ಇನ್ನು ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಮೋಜು ಮಸ್ತಿ ಜಾಸ್ತಿಯಾಗಿಯೇ ಇರುತ್ತದೆ. ಅದರಲ್ಲೂ ಬ್ರಿಗೇಡ್​ ರೋಡ್​, ಎಂಜಿ ರೋಡ್​ಗಳಲ್ಲಿ ಇದರ ಎಫೆಕ್ಟ್​ ತುಸು ಹೆಚ್ಚು ಇರುತ್ತದೆ. ಈ ಹಿನ್ನಲೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಸಾಲು ಮಾಡಲು ಚಿಂತನೆ ನಡೆಸಲಾಗಿದೆ. ಪುರುಷರು, ಮಹಿಳೆಯರು, ಪ್ರೇಮಿಗಳು ಹಾಗೂ ವೃದ್ಧರಿಗೆ ಪ್ರತ್ಯೇಕ‌ ಸಾಲು ಮಾಡಿ, ಅದೇ ಸಾಲಿನಲ್ಲಿ ಸಂಚರಿಸಲು ಮಾತ್ರ ಅವಕಾಶ ನೀಡುವ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.