ಕೆರೆ ಕಲುಷಿತ: ಜಲಚರಗಳಿಗೆ ಜೀವ ಸಂಕಷ್ಟ, ಸರ್ಕಾರದ ವಿರುದ್ಧ ಪರಿಸರವಾದಿಗಳ ಆಕ್ರೋಶ

ಬೆಂಗಳೂರು, ಡಿ.13: ಐಟಿಬಿಟಿ ಸಿಟಿ, ಸಿಲಿಕಾನ್ ಸಿಟಿ, ಕೆರೆಗಳ‌ ನಗರ ಅಂತಾ ಕರೆಯೋ ಬೆಂಗಳೂರಿನ ಕೆರೆಗಳು ಅಪಾಯದಲ್ಲಿವೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಲೂ ಅಭಿವೃದ್ಧಿ ನಡೆಯುತ್ತಿದೆ ಆದರೂ ಕೂಡ ಇನ್ನೊಂದೆಡೆಗೆ ಮಲಿನ ನೀರು ಬಂದು ಕೆರೆ ಸೇರುತ್ತಿದೆ. ಇದರಿಂದ ಜಲಚರ ಜೀವಿಗಳು ವಾಸ ಮಾಡದೇ ಇರೋ ಮಟ್ಟಕ್ಕೆ ಕೆರೆಗಳ ನೀರು ಕಲುಷಿತ ಆಗಿದೆ. ಕೆರೆಗಳಲ್ಲಿ ಮೀನುಗಳು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಆದರು ಸರಿಯಾಗಿ ಕೆರೆ ಅಭಿವೃದ್ಧಿ ಮಾಡದಿರುವುದರಿಂದ ಕೆರೆಗಳು ವಿಷಯುಕ್ತವಾಗುತ್ತಿವೆ.

ಬೆಂಗಳೂರಿನಂತಹ ಮಹಾನಗರದಲ್ಲಿ 200ಕ್ಕೂ ಹೆಚ್ಚು ಕೆರೆಗಳಿವೆ. ಇರುವ ಕೆರೆಗಳನ್ನ‌ ಸಂರಕ್ಷಿಸುತ್ತೆವೆ, ಅಭಿವೃದ್ಧಿ ಪಡಿಸ್ತೆವೆ ಅಂತಾ ಸರ್ಕಾರ ಮತ್ತು ಬಿಬಿಎಂಪಿ  ಹೇಳ್ತಾನೆ ಬರ್ತಾ ಇದೆ. ಆದರೆ ಕೆರೆಗಳ ಸಂರಕ್ಷಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಇರುವ ಫ್ಯಾಕ್ಟರಿಗಳು ಹೊರ ಸೂಸುವ ತ್ಯಾಜ್ಯ ಮತ್ತು ರಾಜಕಾಲುವೆಯಿಂದ ಬರುವ ಅನ್ ಟ್ರೀಟೆಡ್ ನೀರಿನಿಂದ ಕೆರೆಗಳು ಕಲುಷಿತ ಆಗಿ ನೀರಿನ ಪಿಎಚ್ ಕಡಿಮೆಯಾಗಿ ಆಕ್ಸಿಜನ್ ಕೊರತೆಯಿಂದಾಗಿ ಜಲಚರ ಜೀವಿಗಳು ಬದುಕಲಾಗದ ಸ್ಥಿತಿಗೆ ತಲುಪುತ್ತಿವೆ. ಅದೆಷ್ಟೋ ಕೆರೆಯ ಮೀನುಗಳು ಸಾಯುತ್ತಿವೆ. ಜಲಚರ ಜೀವಿಗಳಿಗಷ್ಟೇ ಅಲ್ಲದೇ ಕೆರೆ ಪಕ್ಕದ ಮರಗಳಿಗೂ ಇದು ವಿಷವಾಗುತ್ತದೆ ಎಂದು ಪರಿಸರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೂ ಈ ಬಗ್ಗೆ ವಿಶೇಷ ಆಯುಕ್ತರನ್ನ ಕೇಳಿದರೆ, ಕೆರೆ ನೀರು ಕಲುಷಿತಗೊಳ್ಳುತ್ತಿವೆ ಇದಕ್ಕೆ ಕಾರಣ BWSSB ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಕಂಪ್ಲೀಟ್ ಕೆಲಸ ಆಗುವವರೆಗೂ ಕೆರೆಗೆ ಮಲಿನ ನೀರು ಸೇರುತ್ತಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಸರಿ ಮಾಡುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಕೆರೆಗಳು ಕಲುಷಿತ ಆಗಿ ಜಲಚರ ಜೀವಿಗಳು ವಾಸ ಮಾಡದ ಸ್ಥಿತಿಗೆ ಬಂದಿವೆ‌. ಸರ್ಕಾರ ಮತ್ತು ಬಿಬಿಎಂಪಿ, ಬಿಡಿಎ ಕಲುಷಿತ ಆಗದಂತೆ ತಡೆಗಟ್ಟಿ ಕೆರೆ ಸಂರಕ್ಷಣೆಗೆ ಮುಂದಾಗುತ್ತಾ ಕಾದು ನೋಡಬೇಕಿದೆ.