ಗುಣವಂತೆಯಲ್ಲಿ 5 ವಾಹನಗಳಸರಣಿ ಅಪಘಾತ ತಪ್ಪಿದ ಬಾರಿ ಅನಾಹುತ “

ಹೊನ್ನಾವರ : ಗುಣವಂತೆಯ ಕೇಂದ್ರ ಸ್ಥಳದ ಸರ್ಕಲ್ಲಿನಲ್ಲಿ ಮಾಳ್ಕೋಡ್ ಗುಣವಂತೆ ರಸ್ತೆಯಿಂದ ಬಂದ KA 30 A 2636 ರ ಮಾರುತಿ ಸುಜುಕಿ ಕಾರೊಂದು, ಹೊನ್ನಾವರ ಕಡೆ ನುಗ್ಗಿದಾಗ ಮಂಗಳೂರಿನ ಕಡೆಯಿಂದ ಬರುತ್ತಿರುವ ಗ್ಯಾಸ ಟ್ಯಾಂಕರ್ ಕಾರಿಗೆ ಗುದ್ದಿದೆ.ಬ್ರೇಕ್ ಹಾಕಿದ ಟ್ಯಾಂಕರ್ ಅಲ್ಲೇ ಪರ್ಟಿಯಾಗಿದ್ದು, ಅಲ್ಲೇ ರಸ್ತೆಯ ಪಕ್ಕದಲ್ಲಿ ನಿಂತಿದ್ದ 3 ವಾಹನಗಳಿಗೆ ತಾಗಿ ಅವು ಪರಸ್ಪರ ಗುದ್ದಿ ಕೊಂಡಿದೆ.ಅದ್ರಷ್ಟವಸಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಟ್ಯಾಂಕರ್ ಚಾಲನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೊನ್ನಾವರದ ಆಸ್ಪತ್ರೆಗೆ ಕಳುಹಿಸಿದ್ದಾರೆ.
ರಸ್ತೆಯ ಪಕ್ಕದಲ್ಲಿ ನಿಂತ ಉಳಿದ 3 ವಾಹನದ ಚಾಲಕರು ಹಾಗೂ ಹಮಾಲಿಗಳು ಊಟಕ್ಕೆ ಹೋಗಿದ್ದ ಕಾರಣ ಬಚಾವ್ ಆಗಿದ್ದಾರೆ.
2:40 ಕ್ಕೆ ಈ ಘಟನೆ ಸಂಭವಿಸಿದೆ.ಕಾರಿನೊಳಗೆ ಕಾರವಾರ ಹಲ್ಕಾರಿನ ಒಂದಿಷ್ಟು ಜನ ಇದ್ದು ಯಾರಿಗೂ ಒಂದು ಹನಿ ರಕ್ತ ಬಿಳದಷ್ಟು ಬಚಾವ್ ಆಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.
ತುಂಬಿದ ಗ್ಯಾಸ್ ಟ್ಯಾಂಕ್ ಇದಾಗಿದ್ದು ಮಂಗಳೂರಿನಿಂದ ಗೋವಾಕ್ಕೆ ಹೋಗುತ್ತಿತ್ತು. ಯಾವುದೇ ಹೆಚ್ಚಿನ ಅಪಾಯ ಆಗದೇ ಗುಣವಂತೆಯಲ್ಲಿ ಬಾರಿ ಅನಾಹುತ ತಪ್ಪಿದೆ.
ಸ್ಥಳಕ್ಕೆ ಮಂಕಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿ ತಂಡವು ಬಂದಿದೆ. ಹೆಚ್ಚಿನ ಸುರಕ್ಷತೆಯ ಕಾರಣಕ್ಕೆ ಅಕ್ಕ ಪಕ್ಕದ ಅಂಗಡಿ ಬಾಗಿಲು ಹಾಕಿಸಿದ್ದಾರೆ.
ಇದಿಷ್ಟು ಇಲ್ಲಿಯ ಸುದ್ದಿಯಾಗಿದ್ದು, ಯಾವುದೇ ವಂದಂತಿಗಳನ್ನು ನಂಬಬೇಡಿ