ಧೀರಜ್‌ ಸಾಹು ವಿರುದ್ಧ ಪ್ರತಿಭಟನೆ – ಕಾಂಗ್ರೆಸ್‌ ಭ್ರಷ್ಟಾಚಾರದ ಜನಕ – ಕಾಗೇರಿ ಆರೋಪ

ಕಾರವಾರ : ಜಾರ್ಖಂಡ್‌ನ ಸಂಸದ ಧೀರಜ ಸಾಹು ಅವರ ಮನೆಯಲ್ಲಿ 290 ಕ್ಕೂ ಅಧಿಕ ಕೋಟಿ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕಾರವಾರದ ಸುಭಾಷ ವೃತ್ತದ ಬಳಿ ಸೋಮವಾರ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯ್ತು.

ಜಿಲ್ಲಾಧಿಕಾರಿ ಕಚೇರಿಯ ಬಳಿ ಜಮಾವಣೆಗೊಂಡ ಬಿಜೆಪಿ ಮುಖಂಡರು, ಬಳಿಕ ನಗರಸಭೆಯ ಗಾಂಧಿ ಉದ್ಯಾನದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ರು. ಅಲ್ಲಿಂದ ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಸುಭಾಷ ವೃತ್ತದ ಬಳಿ ಸೇರಿದರು. ಪ್ರತಿಭಟನೆಯ ಉದ್ದಕ್ಕೂ ಕಾಂಗ್ರೆಸ ಪಕ್ಷ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಸ್ಪೀಕರ್  ವಿಶ್ವೇಶ್ವರ ಹೆಗಡೆ ಕಾಗೇರಿ ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಬ್ರಷ್ಟಾಚಾರದ ಜನಕವಾಗಿದೆ. ಈಗಲೂ ಅವರೇ ಚಾಪಿಯನ್ನರು. ಇದೀಗ ಧೀರಜ್ ಸಾಹು ಮುನ್ನೆಲೆಗೆ ಬಂದಿದ್ದಾರೆ ಎಂದರು.

ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ ಸಿಕ್ಕ 300 ಕ್ಕೂ ಹೆಚ್ಚು ಕೋಟಿ ಹಣ ಸ್ವಾತಂತ್ರದ ಬಳಿಕ ದೇಶದಲ್ಲಿ ಸಿಕ್ಕ ಅತಿದೊಡ್ಡ ಬ್ರಷ್ಟಾಚಾರದ ಮೊತ್ತ. ಕಾಂಗ್ರೆಸ್‌ಗೆ ಅಭಿವೃದ್ಧಿಯ ಸಾಧನೆ ಹೇಳಿ ಜನರ ಮುಂದೆ ಹೋಗಲು ಧೈರ್ಯ ಇಲ್ಲ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯನ್ನು ಹಣದ ಬಲದಿಂದ ಗೆಲ್ಲಲು ಹೊರಟಿದೆ ಎಂದು ಟೀಕಿಸಿದರು…

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೇವಲ ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಲು ಹೊರಟಿದ್ದಾರೆ. ಬರ ಪರಿಹಾರಕ್ಕೂ ಹಣವಿಲ್ಲದ ಪರಿಸ್ಥಿತಿ ಇದೆ. ಆದ್ರೂ ಲೋಕಸಭೆ ಚುನಾವಣೆಯ ಹಿನ್ನೆಲೆ ಹಣ ಸಂಗ್ರಹಣೆಗೆ ಕಾಂಗ್ರೆಸ್ ನಿಂತಿದೆ. ಕಾಂಗ್ರೆಸ್‌ ಭ್ರಷ್ಟಾಚಾರದ ಜನಕ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಕಾಂಗ್ರೆಸಿನ ಬ್ರಷ್ಟ ರಾಜಕಾರಣ ಮತ್ತೆ ಬಯಲಾಗಿದೆ. ಮುಂದೆ ಅವರ ನೈಜ್ಯ ಬ್ರಷ್ಟತೆಯನ್ನು ಒಂದೊದಾಗಿ ಬಹಿರಂಗ ಪಡಿಸುತ್ತೇವೆ ಎಂದರು.

ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಕಾಂಗ್ರೇಸ್ ಪಕ್ಷವು ಅಂದಿನ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಇಂದಿನ ಡಿ.ಕೆ ಶಿವಕುಮಾರವರೆಗೂ ಎಲ್ಲರೂ ಬ್ರಷ್ಟರೇ. ರಾಜೀವ್ ಗಾಂಧಿಯವರು ಅಂದು ಸೈನ್ಯದ ವಿಷಯದಲ್ಲಿಯೇ ಬ್ರಷ್ಟಾಚಾರ ಮಾಡಿದ್ದರು. ಆದರೆ ಪ್ರಧಾನಿಯಾಗಿ ನರೇಂದ್ರ ಮೋದಿ ಬಂದ ಬಳಿಕ ದೇಶವು ಅಭಿವೃದಧಿಯತ್ತ ಸಾಗಿದೆ. ಮೋದಿ ಸರಕಾರ ಇರುವವರಗೆ ಮತ್ತೆ ಬ್ರಷ್ಟಾಚಾರ ಮಾಡಲು ಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ  ಎನ್ ಎಸ ಹೆಗಡೆ. ಚಂದ್ರು ಎಸ್ಳೆ. ಎಂ ಜಿ ಭಟ್. ಬಿಜೆಪಿಯ ಜಿಲ್ಲಾ ವಕ್ತಾರ ನಾಗರಾಜ್ ನಾಯಕ್ , ಕಾರವಾರ ಗ್ರಾಮೀಣ ಪ್ರಭಾರಿ ಗಜಾನನ್ ಗುನಗಾ. ಕಾರವಾರ ಅಂಕೋಲಾ ಕ್ಷೇತ್ರದ  ಮಂಡಲ ಅಧ್ಯಕ್ಷರಾದ ಅಧ್ಯಕ್ಷ ನಾಗೆಶ ಕುರಡೇಕರ, ಸುಭಾಷ್ ಗುನಗಿ. ಸಂಜಯ್ ನಾಯ್ಕ್.  ಸಾಮಾಜಿಕ ಜಾಲತಾಣದ ಕಿಶನ್ ಕಾಂಬ್ಳೆ. ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು . ಹಾಗೂ ಜಿಲ್ಲೆಯ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು…