ಜಮ್ಮು ಕಾಶ್ಮೀರಕ್ಕೆ ಕಳಂಕವಾಗಿದ್ದ ಆರ್ಟಿಕಲ್ 370 ಇನ್ನಿಲ್ಲ, ದೇಶದಲ್ಲಿ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು – ಸಚಿವ ಜೋಶಿ ಸಂತಸ

ನವ ದೆಹಲಿ, ಡಿಸೆಂಬರ್ 11: ಭಾರತದ ಸುಪ್ರೀಂ ಕೋರ್ಟ್ 370 ನೇ ವಿಧಿಯನ್ನು ರದ್ದುಗೊಳಿಸಿ ಸೋಮವಾರದಂದು ನೀಡಿರುವ ದೂರಗಾಮಿ, ಮಹತ್ವದ ತೀರ್ಪಿನ ಬಗ್ಗೆ ಕೇಂದ್ರ ಸಂದದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಕಳಂಕವಾಗಿದ್ದ ಆರ್ಟಿಕಲ್ 370 (Article 370) ಕಾನೂನನ್ನು ಪ್ರಧಾನಮಂತ್ರಿ @narendramodi ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸಿದ್ದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದು, ಕೇಂದ್ರ ಸರಕಾರದ ಮಹತ್ವದ ನಿರ್ಧಾರಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ದೇಶದೊಳಗೆ ಎಲ್ಲಾ ರಾಜ್ಯಗಳಿಗೂ ಒಂದೇ ಕಾನೂನು ಇರಬೇಕೆಂಬ ನಮ್ಮ ನಿಲುವಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದ್ದು ಸಂತಸದ ವಿಷಯ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 5, 2019 ರಂದು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಮುಂದಿನ ವರ್ಷ ಸೆಪ್ಟೆಂಬರ್ 30 ರೊಳಗೆ ಕೇಂದ್ರಾಡಳಿತ ಪ್ರದೇಶದ ಅಸೆಂಬ್ಲಿಗೆ ಚುನಾವಣೆ ನಡೆಸುವ ಅಗತ್ಯವನ್ನು ನ್ಯಾಯಾಲಯ ಒತ್ತಿಹೇಳಿದೆ. ಮತ್ತು ರಾಜ್ಯ ಸ್ಥಾನಮಾನವನ್ನು ಶೀಘ್ರವಾಗಿ ಮರುಸ್ಥಾಪಿಸುವಂತೆ ನಿರ್ದೇಶಿಸಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಲ್ಹಾದ್​ ಜೋಶಿ,  ಜಮ್ಮು ಕಾಶ್ಮೀರಕ್ಕೆ ಕಳಂಕವಾಗಿದ್ದ ಆರ್ಟಿಕಲ್ 370 ಕಾನೂನನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸಿದ್ದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದು, ಕೇಂದ್ರದ ಮಹತ್ವದ ನಿರ್ಧಾರಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ದೇಶದೊಳಗೆ ಎಲ್ಲಾ ರಾಜ್ಯಗಳಿಗೂ ಒಂದೇ ಕಾನೂನು ಇರಬೇಕೆಂಬ ನಮ್ಮ ನಿಲುವಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದ್ದು ಸಂತಸದ ವಿಷಯ ಎಂದಿದ್ದಾರೆ