ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣೆ, ಶುಶ್ರೂಷೆ ನೀಡಲು ಎಚ್‌ಜಿಸಿ ಆಸ್ಪತ್ರೆ ನಿರ್ಧಾರ

ಶಿರಸಿ: ಕ್ಯಾನ್ಸರ್ ರೋಗದ ಶುಶ್ರೂಷೆಗೆ ಜಿಲ್ಲೆಯ ರೋಗಿಗಳು ಹೊರ ಜಿಲ್ಲೆಗೆ ತೆರಳಬೇಕಾದ ಸ್ಥಿತಿ ಇದೆ. ಹೀಗಾಗಿ ಟಿಎಸ್‌ಎಸ್ ಆಸ್ಪತ್ರೆ ಜೊತೆ ಸಹಯೋಗ ಮಾಡಿಕೊಂಡಿದ್ದು, ಇಲ್ಲಿಯೇ ಕ್ಯಾನ್ಸರ್ ತಪಾಸಣೆ, ಶುಶ್ರೂಷೆ ನೀಡಲು ನಿರ್ಧರಿಸಿದ್ದೇವೆ ಎಂದು ಎಚ್‌ಜಿಸಿ ಆಸ್ಪತ್ರೆ ಪ್ರಮುಖ ಡಾ. ಜಯಕಿಶನ್ ಹೇಳಿದರು.

ನಗರದಲ್ಲಿ ಗುರುವಾರ ಮಾತನಾಡಿ ಕ್ಯಾನ್ಸರ್ ರೋಗಕ್ಕೆ ತಿಂಗಳುಗಳ ಕಾಲ ಶುಶ್ರೂಷೆ ಪಡೆಯಬೇಕಾಗುತ್ತದೆ. ಇಲ್ಲಿಯ ರೋಗಿಗಳು ಹುಬ್ಬಳ್ಳಿ ಅಥವಾ ಮಂಗಳೂರಿಗೆ ತೆರಳಿ ಅಲ್ಲಿ ಉಳಿಯಬೇಕಾದ ಸ್ಥಿತಿಯಿದೆ. ರೋಗಿಗಳು 30 ಕಿ ಮಿ ಗಿಂತ ಜಾಸ್ತಿ ಪ್ರಯಾಣ ಮಾಡಬಾರದು ಎಂಬುದು ನಮ್ಮ ಗುರಿಯಾಗಿದೆ. ಹೀಗಾಗಿ, ಟಿಎಸ್‌ಎಸ್ ಆಸ್ಪತ್ರೆಯಲ್ಲಿಯೇ ತಪಾಸಣೆ, ಕಿಮೊದಂತಹ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಸ್ಥಳೀಯವಾಗಿಯೇ ಕ್ಯಾನ್ಸರ್ ಚಿಕಿತ್ಸೆ ದೊರೆತರೆ ರೋಗಿಗಳಲ್ಲಿ ಆತಂಕವೂ ಕಡಿಮೆ ಆಗುತ್ತದೆ. ಇದರ ಜೊತೆ ಆಸ್ಪತ್ರೆಯಲ್ಲಿ ಎಡ್ಮಿಟ್ ಆಗದೇ ಸಹ ಚಿಕಿತ್ಸೆ ಪಡೆಯಬಹುದಾಗಿದೆ. ಬೆಂಗಳೂರು, ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ನೀಡುವ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ನೀಡಬಹುದಾಗಿದೆ ಎಂದರು.

ಎಚ್ ಜಿ ಸಿ ಆಸ್ಪತ್ರೆಯ ಡಾ. ವಿಶಾಲ, ಡಾ. ಬಸವರಾಜ, ಟಿಎಸ್ ಎಸ್ ಆಸ್ಪತ್ರೆಯ ಡಾ. ಜೆ ಬಿ ಕಾರಂತ, ಡಾ. ರಾಜಾರಾಮ ಹೆಗಡೆ, ಎಂ ಪಿ ಹೆಗಡೆ ಬಪ್ನಳ್ಳಿ ಇತರರು ಉಪಸ್ಥಿತರಿದ್ದರು.