ಸಿಲ್ಕ್ಯಾರಾ ಸುರಂಗ ಕೊರೆಯುವಿಕೆ ಪೂರ್ಣ, ಶೀಘ್ರದಲ್ಲೇ ಹೊರಬರಲಿದ್ದಾರೆ 41 ಕಾರ್ಮಿಕರು

ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತೆಗೆಯಲು ಎಲ್ಲ ರೀತಿಯ ಕಾರ್ಯಚರಣೆ ನಡೆಸಲಾಗಿದ್ದು, ಇದೀಗ ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಕೆಲವೇ ಕ್ಷಣದಲ್ಲಿ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ರಕ್ಷಣೆ ತಂಡ ತನ್ನ ಕಾರ್ಯವನ್ನು ಮುಂದುವರಿಸಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡಲಿದೆ ಎಂದು ಎನ್​​ಡಿಆರ್​​ಎಫ್​​​​ ಹೇಳಿದೆ. ಸುರಂಗದ ಒಳಗೆ ಎನ್​​​ಡಿಆರ್​ಎಫ್​​​​

​​​​ ತಂಡ ಕೂಡ ಹೋಗಲಿದೆ ಎಂದು ಹೇಳಿದೆ. ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿಗಳು ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ.

ಅಧಿಕಾರಿಗಳು ನೀಡಿದ ವರದಿಗಳ ಪ್ರಕಾರ ಸುರಂಗದ ಒಳಗೆ ಮೊದಲು 41 ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗುವುದು. ಅಲ್ಲಿ ಅವರಿಗೆ ಬೇಕಾದ ಆಹಾರಗಳನ್ನು ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ. ಸುರಂಗದ ಹೊರಗೆ ಬರುತ್ತಿದ್ದಂತೆ ಅವರನ್ನು ಆಂಬ್ಯುಲೆನ್ಸ್​​​ ಮೂಕ ರಿಷಿಕೇಶ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಹೇಳಿದ್ದಾರೆ.

ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಕಾರ್ಯ 17ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಸಂಜೆ ಇಲಿ-ಹೋಲ್ ಗಣಿಗಾರಿಕೆ ಪ್ರಾರಂಭವಾಗಿತ್ತು. ಸುರಂಗಗಳನ್ನು ಪ್ರವೇಶಿಸಲು ಮತ್ತು ಕೈಯಲ್ಲಿ ಅಗೆಯಲು ದೆಹಲಿ ಮತ್ತು ಝಾನ್ಸಿಯಿಂದ ಕನಿಷ್ಠ 6 ಇಲಿ-ಹೋಲ್ ಗಣಿಗಾರರು ಆಗಮಿಸಿದರು. ಅವಶೇಷದ ಒಳಗೆ ಸಿಲುಕಿಕೊಂಡಿರುವ ಕಾರ್ಮಿಕರು 60 ಮೀಟರ್ ಹಿಂದಿದ್ದಾರೆ ಮತ್ತು ರಕ್ಷಣಾ ತಂಡ ಸುಮಾರು 12 ಮೀಟರ್ ದೂರದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ರಕ್ಷಣಾ ತಂಡ, ಒಳಗೆ ಸಿಲುಕಿಕೊಂಡಿರುವ ಕಾರ್ಮಿಕ ಹತ್ತಿರಕ್ಕೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ.