ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನಲ್ಲಿ ಸಂಭ್ರಮ ಸಡಗರದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾರುತಿ ಗುರೂಜಿಯವರು, ಮಕ್ಕಳು – ವಿದ್ಯಾರ್ಥಿಗಳು ನಮ್ಮ ಭವಿಷ್ಯ, ಮಕ್ಕಳು ಉತ್ತಮ ನಡತೆ ತೋರಬೇಕು, ಉತ್ತಮ ವಿದ್ಯಾಭ್ಯಾಸ ಪಡೆದು ಸಾಧನೆಮಾಡಿ ಹೆತ್ತವರಿಗೆ, ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತರಬೇಕು ಎಂಬ ಹಿತವಚನಗಳನ್ನಾಡಿದ್ರು…
ಇದೇ ಸಂದರ್ಭದಲ್ಲಿ ಗುರೂಜಿಯವರು ರಾಷ್ಟ್ರಭಾಷಾ ಹಿಂದಿ ಪರೀಕ್ಷೆಯಲ್ಲಿ ಹಾಗೂ ರಾಷ್ಟ್ರ ಮಟ್ಟದ ಪ್ರತಿಭಾ ಪುರಸ್ಕಾರ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹಮಾನ ವಿತರಿಸಿದರು. ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಅಮೃತ ಹಸ್ತದಿಂದ ನೀತಿಕಥಾ ಪುಸ್ತಕಗಳನ್ನು ನೀಡಿ ಆಶೀರ್ವದಿಸಿದರು…
ಶಿಕ್ಷಕರು ಮಕ್ಕಳಿಗಾಗಿ ವಿವಿಧ ಸುಂದರವಾದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆಯನ್ನು ನಡೆಸಲಾಯಿತು. ಸಮಾರಂಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕವೃಂದ, ಕ್ಷೇತ್ರದ ಭಕ್ತವೃಂದ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹಾಜರಿದ್ದು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಯಾಗಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಅರ್ಪಿತಾ ಮಾರುತಿ ಗುರೂಜಿ, ಶಾಲೆಯ ಆಡಳಿತ ನಿರ್ದೇಶಕ ಜಿ. ಟಿ. ಹೆಗಡೆ, ಪಾಲಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿನಾಯಕ ನಾಯ್ಕ, ಪಾಲಕ-ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಹೆಗಡೆ, ಶಾಲೆಯ ಪ್ರಾಂಶುಪಾಲರಾದ ಎಸ್. ಜೊನ್ ಬೊಸ್ಕೊ ಉಪಸ್ಥಿತರಿದ್ದರು…